#IndiaNews Archives - Samyukta Karnataka

ದಿಶಾ ಸಾಲಿಯನ್ ಪ್ರಕರಣದಲ್ಲಿ ಹೊಸ ತಿರುವು: ಮುಂಬೈ ಪೊಲೀಸರ ತನಿಖೆಗೆ ಹೈಕೋರ್ಟ್ ತರಾಟೆ!
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ನಿಗೂಢ ಸಾವಿನ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಒಪ್ಪಿಸಿ ಆದೇಶಿಸಿದೆ. ಮುಂಬೈ ಪೊಲೀಸರ ತನಿಖೆಯಲ್ಲಿ ಗಂಭೀರ ಲೋಪಗಳಾಗಿವೆ ಎಂದು ಆರೋಪಿಸಿ, ಮರುತನಿಖೆಗೆ ಒತ್ತಾಯಿಸಿ ದಿಶಾ ತಂದೆ ಸತೀಶ್ ಸಾಲಿಯನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ನಿರ್ಧಾರ ಕೈಗೊಂಡಿದೆ.

ನಂತರ ಜೂನ್ 8, 2020 ರಂದು ಮುಂಬೈನ ಮಲಾಡ್‌ನಲ್ಲಿರುವ ಕಟ್ಟಡದ 14ನೇ ಮಹಡಿಯಿಂದ ಬಿದ್ದು ದಿಶಾ ಸಾಲಿಯನ್ ಮೃತಪಟ್ಟಿದ್ದರು. ಆರಂಭದಲ್ಲಿ ಮುಂಬೈ ಪೊಲೀಸರು ಇದನ್ನು ಆಕಸ್ಮಿಕ ಸಾವು ಮತ್ತು ಆತ್ಮಹತ್ಯೆ ಎಂದು ವರದಿ ನೀಡಿದ್ದರು. ಆದ್ರೆ ಇದನ್ನು ಒಪ್ಪದ ಅವರ ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪಿಸಿ ನ್ಯಾಯಾಲಯದ ಬಾಗಿಲು ತಟ್ಟಿದ್ದರು. ಹಾಗೇ ವಿಚಾರಣೆ ವೇಳೆ, ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದರೂ ಎಫ್‌ಐಆರ್ ದಾಖಲಿಸದಿರುವುದು ಮತ್ತು ಮರಣೋತ್ತರ ಪರೀಕ್ಷೆಯ ವರದಿಯಲ್ಲಿನ ವ್ಯತ್ಯಾಸಗಳ ಕುರಿತು ಹೈಕೋರ್ಟ್ ಮುಂಬೈ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ತಿಳಿಸಿರುವ ಹೈಕೋರ್ಟ್, ಯಾರನ್ನೂ ತಕ್ಷಣವೇ ಆರೋಪಿ ಎಂದು ಪರಿಗಣಿಸದೆ, ಸೂಕ್ತ ಸಾಕ್ಷ್ಯಾಧಾರ ಹಾಗೂ ಹೇಳಿಕೆಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಿದೆ. ಹೈಕೋರ್ಟ್‌ನ ಈ ಆದೇಶವನ್ನು ದಿಶಾ ತಂದೆ ಒಪ್ಪಿಕೊಂಡಿದ್ದಾರೆ.

The post ದಿಶಾ ಸಾಲಿಯನ್ ಪ್ರಕರಣದಲ್ಲಿ ಹೊಸ ತಿರುವು: ಮುಂಬೈ ಪೊಲೀಸರ ತನಿಖೆಗೆ ಹೈಕೋರ್ಟ್ ತರಾಟೆ! appeared first on Samyukta Karnataka.

ರಾಷ್ಟ್ರಪತಿ ಅಂಗರಕ್ಷಕನ ಅಂದಕ್ಕೆ ಯುವತಿಯರು ಫಿದಾ: ನೆಟ್ಟಿಗರ ಮನಗೆದ್ದ ಯುವ ಅಧಿಕಾರಿ!
ನವದೆಹಲಿ: ಸಾಮಾನ್ಯವಾಗಿ ದೇಶದ ಪ್ರಮುಖ ಗಣ್ಯರು ಅಥವಾ ಸಿನಿಮಾ ತಾರೆಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರ ರಕ್ಷಣೆಗೆ ನಿಯೋಜನೆಗೊಂಡಿರುವ ಬಾಡಿಗಾರ್ಡ್‌ಗಳು (ಅಂಗರಕ್ಷಕರು) ಜನರ ಗಮನ ಸೆಳೆಯುವುದು ಸಹಜ. ಆದ್ರೆ ಸದ್ಯ ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಗರಕ್ಷಕರೊಬ್ಬರು ತಮ್ಮ ಆಕರ್ಷಕ ವ್ಯಕ್ತಿತ್ವ ಹಾಗೂ ಅಪ್ರತಿಮ ಅಂದದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದಾರೆ.

ರಾಷ್ಟ್ರಪತಿಗಳ ಅಂಗರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಮೇಜರ್ ರಿಷಬ್ ಸಿಂಗ್ ಸಂಬ್ಯಾಲ್ ಈಗ ಇಂಟರ್ನೆಟ್‌ನಲ್ಲಿ ತಲ್ಲಣ ಮೂಡಿಸಿರುವ ಯುವ ಅಧಿಕಾರಿ. ರಾಷ್ಟ್ರಪತಿಗಳು ಪಾಲ್ಗೊಳ್ಳುವ ವಿವಿಧ ಅಧಿಕೃತ ಕಾರ್ಯಕ್ರಮಗಳಲ್ಲಿ ಸದಾ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಇವರ ಗಂಭೀರ ನೋಟ ಮತ್ತು ಹ್ಯಾಂಡ್ಸಮ್ ಲುಕ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಯುವತಿಯರು ಫಿದಾ ಆಗಿದ್ದಾರೆ.

ಹಾಗೇ ವಿವಿಧ ಕಾರ್ಯಕ್ರಮಗಳಿಗೆ ರಾಷ್ಟ್ರಪತಿಗಳು ಆಗಮಿಸಿದಾಗ, ಅಲ್ಲಿ ನೆರೆದಿರುವ ಯುವತಿಯರು ರಾಷ್ಟ್ರಪತಿಗಳಿಗಿಂತ ಹೆಚ್ಚಾಗಿ ಈ ಯುವ ಅಧಿಕಾರಿಯನ್ನು ನೋಡಲು ಮುಗಿಬೀಳುತ್ತಿದ್ದಾರೆ ಎನ್ನಲಾಗಿದೆ. ಈಗ ಪರಿಸ್ಥಿತಿ ಎಲ್ಲಿಗೆ ಬಂದು ತಲುಪಿದೆ ಎಂದರೆ, ಮೇಜರ್ ರಿಷಬ್ ಸಿಂಗ್ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲಾ ಸೆಲ್ಫಿ ತೆಗೆದುಕೊಳ್ಳಲು ಮತ್ತು ಹತ್ತಿರದಿಂದ ನೋಡಲು ಯುವತಿಯರ ದಂಡೇ ಮುತ್ತಿಗೆ ಹಾಕುತ್ತಿದೆ. ಯುವತಿಯರ ಈ ಅತಿಯಾದ ಕ್ರೇಜ್‌ನಿಂದಾಗಿ ಸ್ವತಃ ಅಂಗರಕ್ಷಕರೇ ಮುಜುಗರಕ್ಕೊಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಧಿಕಾರಿಯೊಬ್ಬರ ಅಂದಕ್ಕೆ ಸಾರ್ವಜನಿಕರು ಈ ಪರಿ ಮನಸೋತಿರುವುದನ್ನು ಕಂಡು, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. “ರಾಷ್ಟ್ರಪತಿಗಳಿಗೆ ಭದ್ರತೆ ನೀಡುವ ಈ ಬಾಡಿಗಾರ್ಡ್‌ಗೆ ಯುವತಿಯರಿಂದ ರಕ್ಷಣೆ ಪಡೆಯಲು ಈಗ ಮತ್ತೊಬ್ಬ ಬಾಡಿಗಾರ್ಡ್ ಬೇಕಾಗಿದೆ” ಎಂದು ನೆಟ್ಟಿಗರು ತಮಾಷೆಯಾಗಿ ಚರ್ಚಿಸುತ್ತಿದ್ದಾರೆ.

ಒಟ್ಟಾರೆ.. ಮೇಜರ್ ರಿಷಬ್ ಸಿಂಗ್ ಈ ಸೆಲೆಬ್ರಿಟಿ ಮಾದರಿಯ ಜನಪ್ರಿಯತೆ ಸದ್ಯ ದೇಶಾದ್ಯಂತ ಭಾರಿ ಸುದ್ದಿಯಾಗುತ್ತಿದೆ.

The post ರಾಷ್ಟ್ರಪತಿ ಅಂಗರಕ್ಷಕನ ಅಂದಕ್ಕೆ ಯುವತಿಯರು ಫಿದಾ: ನೆಟ್ಟಿಗರ ಮನಗೆದ್ದ ಯುವ ಅಧಿಕಾರಿ! appeared first on Samyukta Karnataka.

ಮೋದಿ ಸ್ಥಾನಕ್ಕೆ ಪೈಪೋಟಿ ನೀಡಲಿದ್ದಾರೆ ಈ ‘ಫ್ಯೂಚರ್ ಪ್ರೈಮ್ ಮಿನಿಸ್ಟರ್’; ಪುಟ್ಟ ಪೋರ ಕೊಟ್ಟ ಭರವಸೆ ಏನು?
ರಾಜ್ಯಾದ್ಯಂತ ಬಿಸಿಲ ಧಗೆ ಏರುತ್ತಿದ್ದು, ಜನರು ಬಿಸಿಲ ತಾಪದಿಂದ ತತ್ತರಿಸುತ್ತಿದ್ದಾರೆ. ಇದೇ ಸಮಯದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಅದು ಒಬ್ಬ ಪುಟ್ಟ ಶಾಲಾ ಬಾಲಕನ ವಿಡಿಯೋ.

ಸ್ಕೂಲ್ ಯೂನಿಫಾರ್ಮ್ ಧರಿಸಿರುವ ಈ ಪುಟ್ಟ ಬಾಲಕ, ಬಿಸಿಲಿನ ಝಳಕ್ಕೆ ಸ್ವಲ್ಪ ಬಳಲಿದಂತೆ ಕಾಣುತ್ತಿದ್ದಾನೆ. ಆದರೆ, ಅವನ ಮಾತುಗಳಲ್ಲಿ ಮಾತ್ರ ಗಂಭೀರವಾದ ಉದ್ದೇಶವಿದೆ. ಕ್ಯಾಮೆರಾ ಮುಂದೆ ನಿಂತು ಮಾತನಾಡುತ್ತಾ, “ತುಂಬಾ ಬಿಸಿಲಿದೆ, ಆದರೂ ನಾವು ಶಾಲೆಗೆ ಹೋಗಲೇಬೇಕಾದ ಅನಿವಾರ್ಯತೆ ಇದೆ” ಎಂದು ತನ್ನ ನೋವನ್ನು ತೋಡಿಕೊಳ್ಳುತ್ತಾನೆ.

ಇಲ್ಲಿಯವರೆಗೆ ಎಲ್ಲವೂ ಸಾಮಾನ್ಯ ಎನಿಸಿದರೂ, ಮುಂದೆ ಈ ಬಾಲಕ ನೀಡಿದ ‘ಚುನಾವಣಾ ಭರವಸೆ’ ಮಾತ್ರ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. “ನಾನು ಮುಂದೊಂದು ದಿನ ಪ್ರಧಾನಿಯಾದರೆ, ಮೊದಲು ಮಾಡುವ ಕೆಲಸವೆಂದರೆ ಬೇಸಿಗೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸುವುದು. ಎಲ್ಲರೂ ಮನೆಯಲ್ಲೇ ತಂಪಾಗಿ ಇರಬೇಕು!” ಎಂದು ತೀರಾ ಗಂಭೀರವಾಗಿ ಹೇಳುತ್ತಾನೆ.

ಈ ಬಾಲಕನ ಮುಗ್ಧತೆ ಮತ್ತು ಅವನ ಈ ‘ಭರವಸೆ’ ನೆಟ್ಟಿಗರ ಮನಗೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭರ್ಜರಿಯಾಗಿ ಶೇರ್ ಆಗುತ್ತಿದ್ದು, ಸಾವಿರಾರು ಜನರು ಈ ಬಾಲಕನಿಗೆ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ. “ಈ ಬಾಲಕನೇ ನಮಗೆ ಬೇಕಾಗಿರುವ ನಿಜವಾದ ರಾಜಕಾರಣಿ”, “ಈತನ ಮಾತಿನಲ್ಲಿ ಸತ್ಯವಿದೆ” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಒಟ್ಟಾರೆಯಾಗಿ, ಈ ಪುಟ್ಟ ಬಾಲಕನ ಮಾತುಗಳು ನಗೆ ಉಕ್ಕಿಸಿದರೂ, ಕಠಿಣ ಬಿಸಿಲಿನಲ್ಲಿ ಶಾಲೆಗೆ ಹೋಗುವ ವಿದ್ಯಾರ್ಥಿಗಳ ನಿಜವಾದ ಸಮಸ್ಯೆಯತ್ತ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ರಾಜಕೀಯದ ಗೋಜಿಲ್ಲದೆ, ಕೇವಲ ಶಾಲೆಗೆ ರಜೆ ಬೇಕೆಂದು ಕೇಳುತ್ತಿರುವ ಈ ‘ಫ್ಯೂಚರ್ ಪ್ರೈಮ್ ಮಿನಿಸ್ಟರ್’ಗೆ ಈಗ ಇಂಟರ್ನೆಟ್ ಜಗತ್ತಿನ ಬಹುದೊಡ್ಡ ಮತ ಸಿಕ್ಕಿದೆ ಎಂದರೆ ತಪ್ಪಾಗಲಾರದು.

The post ಮೋದಿ ಸ್ಥಾನಕ್ಕೆ ಪೈಪೋಟಿ ನೀಡಲಿದ್ದಾರೆ ಈ ‘ಫ್ಯೂಚರ್ ಪ್ರೈಮ್ ಮಿನಿಸ್ಟರ್’; ಪುಟ್ಟ ಪೋರ ಕೊಟ್ಟ ಭರವಸೆ ಏನು? appeared first on Samyukta Karnataka.