#DBoss Archives - Samyukta Karnataka

ನಟ ದರ್ಶನ್ ಅರ್ಜಿಗೆ ಹೈಕೋರ್ಟ್‌ನಲ್ಲಿ ಭಾಗಶಃ ಜಯ: ಪ್ರದೋಷ್ ಮಾಫಿ ಸಾಕ್ಷಿ ಪ್ರಕ್ರಿಯೆಗೆ ಬಿತ್ತು ಬ್ರೇಕ್!
ರೇಣುಕಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಗೆ ಹೈಕೋರ್ಟ್‌ನಲ್ಲಿ ಭಾಗಶಃ ಜಯ ಸಿಕ್ಕಿದೆ. ಸಹ ಆರೋಪಿ ಪ್ರದೋಷ್‌ನನ್ನು ‘ಮಾಫಿ ಸಾಕ್ಷಿ’ಯನ್ನಾಗಿ (ಅಪ್ರೂವರ್) ಪರಿಗಣಿಸುವ ಪ್ರಕ್ರಿಯೆಯನ್ನು ಪ್ರಶ್ನಿಸಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಭಾಗಶಃ ಪುರಸ್ಕರಿಸಿದೆ.

ಈ ಸಂಬಂಧ ಈ ಹಿಂದೆ ಸೆಷನ್ಸ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಮಾರ್ಪಡಿಸಿರುವ ಹೈಕೋರ್ಟ್, ಮುಂದಿನ ಒಂದು ವಾರದೊಳಗೆ ಈ ಕುರಿತು ಹೊಸ ಆದೇಶ ಹೊರಡಿಸುವಂತೆ ಕೆಳ ನ್ಯಾಯಾಲಯಕ್ಕೆ ಸೂಚನೆ ನೀಡಿದೆ. ವಿಶೇಷವೆಂದರೆ, ಈ ಪ್ರಕ್ರಿಯೆಯಲ್ಲಿ ಯಾವುದೇ ಹೊಸ ವಾದ-ಪ್ರತಿವಾದಗಳಿಗೆ ಅವಕಾಶ ನೀಡದಂತೆ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ದರ್ಶನ್ ಆಕ್ಷೇಪವೇನಾಗಿತ್ತು?: ಈ ಹಿಂದೆ ಸೆಷನ್ಸ್ ಕೋರ್ಟ್‌ನಲ್ಲಿ ಪ್ರದೋಷ್‌ನ ಸನ್ನಡತೆ ಬಗ್ಗೆ ಪ್ರೊಬೇಷನರಿ ಅಧಿಕಾರಿ ವರದಿಯೊಂದನ್ನು ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ನಿಯಮದ ಪ್ರಕಾರ, ಪ್ರೊಬೇಷನರಿ ಅಧಿಕಾರಿ ಕೇವಲ ಶಿಕ್ಷೆಗೊಳಗಾದ ಕೈದಿಗಳ (ಸಜಾಬಂಧಿ) ಬಗ್ಗೆ ಮಾತ್ರ ವರದಿ ನೀಡಲು ಸಾಧ್ಯ. ಆದರೆ ಪ್ರದೋಷ್ ಸದ್ಯ ವಿಚಾರಣಾಧೀನ ಆರೋಪಿಯಾಗಿದ್ದಾನೆ.

ಕಾನೂನಿನ ಪ್ರಕಾರ ವಿಚಾರಣಾಧೀನ ಆರೋಪಿಯ ನಡವಳಿಕೆ ಬಗ್ಗೆ ವರದಿ ನೀಡಲು ಅವಕಾಶವಿಲ್ಲ. ಹೀಗಾಗಿ ಆ ವರದಿಯನ್ನು ರದ್ದುಗೊಳಿಸಬೇಕು ಎಂದು ದರ್ಶನ್ ಪರ ವಕೀಲರು ವಾದಿಸಿದ್ದರು. ದರ್ಶನ್ ಅವರ ಈ ತಾಂತ್ರಿಕ ಆಕ್ಷೇಪವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಈಗ ಹಳೆಯ ಆದೇಶವನ್ನು ಮಾರ್ಪಡಿಸಲು ಸೂಚಿಸಿದೆ. ಇದು ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ತಿರುವು ಎಂದು ವಿಶ್ಲೇಷಿಸಲಾಗುತ್ತಿದೆ.

The post ನಟ ದರ್ಶನ್ ಅರ್ಜಿಗೆ ಹೈಕೋರ್ಟ್‌ನಲ್ಲಿ ಭಾಗಶಃ ಜಯ: ಪ್ರದೋಷ್ ಮಾಫಿ ಸಾಕ್ಷಿ ಪ್ರಕ್ರಿಯೆಗೆ ಬಿತ್ತು ಬ್ರೇಕ್! appeared first on Samyukta Karnataka.

ಹೊಸ ದಾಳ ಉರುಳಿಸಿದ ನಟ ದರ್ಶನ್ ಪರ ವಕೀಲರು; ಈ ಬಾರಿ ಪಕ್ಕಾ ಜೈಲಾ? ಬೇಲಾ? ಡಿಸೈಡ್!
ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತೂಗುದೀಪ ಅವರಿಗೆ ಸದ್ಯಕ್ಕೆ ಜೈಲೇ ಗತಿಯಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್, ಕಳೆದ ಹಲವು ತಿಂಗಳುಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಹಿಂದೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ, ಕಳೆದ ವರ್ಷ ಆಗಸ್ಟ್ 14ರಂದು ದರ್ಶನ್ ಅವರನ್ನು ಮತ್ತೆ ಬಂಧಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಹೊರಬರಲು ಅವರು ನಡೆಸುತ್ತಿರುವ ಪ್ರಯತ್ನಗಳು ಫಲ ನೀಡಿಲ್ಲ.

ಈಗ ದರ್ಶನ್ ಪರ ವಕೀಲರು ಹೊಸದೊಂದು ದಾಳ ಉರುಳಿಸಿದ್ದು, ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಏಪ್ರಿಲ್ 14ರಂದು ಸುಪ್ರೀಂಕೋರ್ಟ್‌ನಲ್ಲಿ ದರ್ಶನ್ ಪರವಾಗಿ ಹೊಸ ಜಾಮೀನು ಅರ್ಜಿಯನ್ನು ಸಲ್ಲಿಕೆ ಮಾಡಲಾಗಿದೆ. ಈ ಅರ್ಜಿಯಲ್ಲಿ ಪ್ರಮುಖವಾಗಿ ‘ಸಾಕ್ಷ್ಯ ವಿಚಾರಣೆ ವಿಳಂಬ’ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ. ತನಿಖೆ ಮತ್ತು ಸಾಕ್ಷಿಗಳ ವಿಚಾರಣೆ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ, ಸುದೀರ್ಘ ಕಾಲ ಜೈಲಿನಲ್ಲಿರುವುದು ಸರಿಯಲ್ಲ ಎಂಬ ವಾದವನ್ನು ಮಂಡಿಸಲು ದರ್ಶನ್ ತಂಡ ಸಜ್ಜಾಗಿದೆ.

ಇದನ್ನು ಓದಿ: http://Toxic ಮುಂದೂಡಿಕೆ : “ಕೆಲವು ಕಥೆಗಳು ತಾಳ್ಮೆ ಕೇಳುತ್ತವೆ” – ಯಶ್

ಬೆಂಗಳೂರಿನ ಪರಪ್ಪನ ಅಗ್ರಹಾರದ ಕತ್ತಲ ಕೋಣೆಯಲ್ಲಿ ದಿನ ಕಳೆಯುತ್ತಿರುವ ದರ್ಶನ್ ಅವರಿಗೆ ಈ ಅರ್ಜಿ ಈಗ ದೊಡ್ಡ ಭರವಸೆಯಾಗಿದೆ. ಹೈಕೋರ್ಟ್‌ನಲ್ಲಿ ಜಾಮೀನು ಸಿಕ್ಕರೂ ಸುಪ್ರೀಂಕೋರ್ಟ್ ಅದನ್ನು ತಡೆಹಿಡಿದಿದ್ದರಿಂದ, ಈ ಬಾರಿ ಅತ್ಯುನ್ನತ ನ್ಯಾಯಾಲಯದ ಮುಂದೆ ಅತ್ಯಂತ ಬಲವಾದ ವಾದಗಳನ್ನು ಮಂಡಿಸಬೇಕಾದ ಅನಿವಾರ್ಯತೆ ಅವರಿಗಿದೆ.

ಮೂಲಗಳ ಪ್ರಕಾರ, ಮುಂದಿನ ವಾರ ಸುಪ್ರೀಂಕೋರ್ಟ್‌ನಲ್ಲಿ ಈ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಸುಪ್ರೀಂಕೋರ್ಟ್ ‘ವಿಳಂಬ’ದ ಕಾರಣವನ್ನು ಪುರಸ್ಕರಿಸಿದರೆ ದರ್ಶನ್ ಹೊರಬರಬಹುದು, ಇಲ್ಲವಾದಲ್ಲಿ ಮತ್ತಷ್ಟು ದಿನ ಅವರು ಜೈಲು ಪಾಲಾಗುವುದು ಖಚಿತ. ಇಡೀ ಚಿತ್ರರಂಗ ಮತ್ತು ಅಭಿಮಾನಿಗಳು ಈ ವಿಚಾರಣೆಯ ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

The post ಹೊಸ ದಾಳ ಉರುಳಿಸಿದ ನಟ ದರ್ಶನ್ ಪರ ವಕೀಲರು; ಈ ಬಾರಿ ಪಕ್ಕಾ ಜೈಲಾ? ಬೇಲಾ? ಡಿಸೈಡ್! appeared first on Samyukta Karnataka.