Home ಕ್ರೀಡೆ India-England 4th Test:‌‌ ಆಂಗ್ಲರ­ ಗೆಲುವಿನ ಓಟಕ್ಕೆ ಭಾರತ ಬ್ರೇಕ್

India-England 4th Test:‌‌ ಆಂಗ್ಲರ­ ಗೆಲುವಿನ ಓಟಕ್ಕೆ ಭಾರತ ಬ್ರೇಕ್

0

ಮ್ಯಾಂಚೆಸ್ಟರ್: ನಾಯಕ ಶುಭಮನ್ ಗಿಲ್, ಆಲ್‌ ರೌಂಡರ್‌ಗಳಾದ ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ಅವರುಗಳ ಶತಕದ ನೆರವಿನಿಂದ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಯಶಸ್ವಿಯಾಗಿದೆ.

ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯದಲ್ಲಿ ಡ್ರಾ ಸಾಧಿಸುವ ಮೂಲಕ ಸರಣಿ ಸಮವಾಗಿಸುವ ಕನಸನ್ನು ಉಳಿಸಿಕೊಂಡಿದೆ. ಮೊದಲ ಹಾಗೂ ಮೂರನೇ ಪಂದ್ಯದಲ್ಲಿ ಸೋಲುಕಂಡಿರುವ ಭಾರತ ಸರಣಿಯಲ್ಲಿ 2-1 ಹಿನ್ನಡೆಯನ್ನು ಪಡೆದಿದೆ. ಆದರೆ, ಇಂಗ್ಲೆಂಡ್‌ ಸರಣಿ ಗೆಲ್ಲಬೇಕಾದರೆ ಉಳಿದ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಬೇಕೆಂಬ ಅನಿವಾರ್ಯ ಇಲ್ಲದಿದ್ದರೂ ಕೂಡ ಆ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಬೇಕಿದೆ.

ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದಿದ್ದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 358 ರನ್‌ಗಳಿಗೆ ಆಲೌಟ್‌ ಆಗಿತ್ತು. ಆಗ ಸಾಯಿ ಸುದರ್ಶನ 61 ರನ್‌ಗಳ ಗರಿಷ್ಠ ರನ್‌ ಕಾಣಿಕೆ ನೀಡಿದ್ದರು. ಆದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಜೋ ರೂಟ್‌ ಮತ್ತು ಬೆನ್‌ ಸ್ಟೋಕ್ಸ್‌ ಅವರ ಶತಕದ ನೆರವಿನಿಂದ ಇಂಗ್ಲೆಂಡ್‌ 669 ರನ್‌ಗಳ ಬೃಹತ್‌ ರನ್‌ ಪೇರಿಸಿತು.

ಇದಕ್ಕೆ ಉತ್ತರವಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಇಳಿದ ಭಾರತಕ್ಕೆ ಇಂಗ್ಲೆಂಡ್‌ ಬೌಲರ್‌ಗಳು ಆರಂಭಿಕ ಆಘಾತ ನೀಡಿದರು. ಖಾತೆ ತೆರೆಯದೇ ಇಬ್ಬರು ಬ್ಯಾಟ್ಸಮನ್‌ಗಳು ಪೆವಿಲಿಯನ್‌ ಸೇರಿದರು. ಯಶಸ್ವಿ ಜೈಸ್ವಾಲ್‌ ಹಾಗೂ ಸಾಯಿ ಸುದರ್ಶನ ಶೂನ್ಯಕ್ಕೆ ಔಟಾಗುತ್ತಿದ್ದಂತೆ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ಆದರೆ ಬಳಿಕ ಬಂದ ಕೆ.ಎಲ್‌ ರಾಹುಲ್‌ ಮತ್ತು ಶುಭಮನ್‌ ಗಿಲ್‌ ಜೋಡಿ 188 ರನ್‌ಗಳ ಜತೆಯಾಟ ನಡೆಸಿ ತಂಡವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದರು.

ಶತಕಕ್ಕೆ 10 ರನ್‌ಗಳು ಬಾಕಿ ಇರುವಂತೆಯೇ ಕೆ.ಎಲ್‌ ರಾಹುಲ್‌, ಬೆನ್‌ ಸ್ಟೋಕ್ಸ್‌ ಅವರಿಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು. ಬಳಿಕ ವಾಷಿಂಗ್ಟನ್ ಸುಂದರ ಜತೆಗೆ 34 ರನ್‌ಗಳ ಜತೆಯಾಟ ನಡೆಸಿದ್ದ ನಾಯಕ ಶುಭಮನ್‌ ಗಿಲ್‌ (103 ರನ್, 238 ಎಸೆತ, 12 ಬೌಂಡರಿ) ಶತಕ ಸಿಡಿಸಿ ಹೊರನಡೆದರು.

ಆಲ್‌ ರೌಂಡರ್‌ಗಳಾದ ವಾಷಿಂಗ್ಟನ್ ಸುಂದರ್ ಅಜೇಯ 101 ರನ್ (206 ಎಸೆತ, 9 ಬೌಂಡರಿ, 1 ಸಿಕ್ಸರ್) ಮತ್ತು ರವೀಂದ್ರ ಜಡೇಜಾ ಅಜೇಯ 107 ರನ್ (185 ಎಸೆತ, 13 ಬೌಂಡರಿ, 1 ಸಿಕ್ಸರ್) ಗಳಿಸಿ ಪಂದ್ಯವನ್ನು ಡ್ರಾ ದತ್ತ ಕೊಂಡೊಯ್ದರು. ಅಂತಿಮವಾಗಿ ಭಾರತ 425 ಕ್ಕೆ 4 ವಿಕೆಟ್‌ ಕಳೆದುಕೊಂಡಿತು.

ಜುಲೈ 31ರಿಂದ ಅಂತಿಮ ಟೆಸ್ಟ್‌ ಪಂದ್ಯ ನಡೆಯಲಿದ್ದು, ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಈ ಪಂದ್ಯ ನಿರ್ಣಾಯಕವಾಗಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version