Home ಕ್ರೀಡೆ Asia Cup 2025: ಬುಧವಾರವೇ ಫೈನಲ್‌ಗೇರುವುದೇ ಭಾರತ?, ಬಾಂಗ್ಲಾ ವಿರುದ್ಧ ಗೆಲುವು ಅಗತ್ಯ

Asia Cup 2025: ಬುಧವಾರವೇ ಫೈನಲ್‌ಗೇರುವುದೇ ಭಾರತ?, ಬಾಂಗ್ಲಾ ವಿರುದ್ಧ ಗೆಲುವು ಅಗತ್ಯ

0

ಏಷ್ಯಾಕಪ್‌ನಲ್ಲಿ ಪಾಕ್ ವಿರುದ್ಧದ 2 ಪಂದ್ಯಗಳನ್ನು ಒಳಗೊಂಡಂತೆ, ಸತತ 4 ಪಂದ್ಯಗಳನ್ನು ಗೆದ್ದಿರುವ ಭಾರತೀಯ ಪಡೆ, ಇಂದು ಬಾಂಗ್ಲಾದೇಶವನ್ನು ಎದುರಿಸುತ್ತಿದೆ. ಸೋಲಿಲ್ಲದ ಸರದಾರನಾಗಿಯೇ ಫೈನಲ್ ಪ್ರವೇಶಿಸಲು ಇಂದು ಸೂರ್ಯಪಡೆಗೆ ಗೆಲುವು ಅನಿವಾರ್ಯ. ಮೇಲ್ನೋಟಕ್ಕೆ ಭಾರತವೇ ಬಲಿಷ್ಠವಾಗಿದ್ದರೂ, ಬಾಂಗ್ಲಾದೇಶವನ್ನು ನಿರ್ಲಕ್ಷಿಸುವಂತಿಲ್ಲ. ಆದರೂ, ಕೆಲ ಆಟಗಾರರಿಗೆ ವಿಶ್ರಾಂತಿ ನೀಡಿ, ಆ ಸ್ಥಾನಗಳಲ್ಲಿ ಅರ್ಶದೀಪ್ ಸಿಂಗ್, ಜಿತೇಶ್ ಶರ್ಮಾಗೆ ಸ್ಥಾನ ನೀಡುವ ಲೆಕ್ಕಾಚಾರ ನಡೆದಿದೆ ಎನ್ನಲಾಗಿದೆ.

ಸದ್ಯ ಸೂಪರ್ 4 ಹಂತದಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಫೈನಲ್‌ಗೇರಲು ಕನಿಷ್ಠ ಒಂದು ಪಂದ್ಯ ಗೆಲುವಿನ ಅಗತ್ಯವಿದೆ. ಹಾಗಾಗಿ, ಈ ಹಂತದಲ್ಲಿ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಡಲಿರುವ ಭಾರತ ತಂಡ, ಅದಕ್ಕೂ ಮುನ್ನವೇ ಫೈನಲ್‌ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಚಿಂತಿಸಿದೆ. ಈ ಏಷ್ಯಾಕಪ್‌ನಲ್ಲಿ ಜಸ್ಪ್ರೀತ್ ಬುಮ್ರಾ ದಾಳಿ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ.

ಸ್ಪಿನ್ ಅಸ್ತ್ರಗಳೇ ಹೆಚ್ಚು ವಿಕೆಟ್ ಕಬಳಿಸುವ ಹಿನ್ನೆಲೆಯಲ್ಲಿ ಸ್ಪಿನ್ನರ್ಗಳಾದ ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿ ಹನ್ನೊಂದರ ಬಳಗದಲ್ಲಿ ಆಡಿಸಲಾಗುತ್ತದೆ. ಬುಮ್ರಾ ಪಾಕ್ ವಿರುದ್ಧ 45 ರನ್‌ಗಳನ್ನು ನೀಡಿದ್ದು ವಿಕೆಟ್ ಕಬಳಿಸಲು ಆಗಲಿಲ್ಲ. ಟೂರ್ನಮೆಂಟ್‌ನಲ್ಲಿ, ಇಲ್ಲಿಯವರೆಗೆ ಬುಮ್ರಾ 3 ಪಂದ್ಯಗಳಲ್ಲಿ ಕೇವಲ 3 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು, ಎಸೆದಿರುವ 11 ಓವರ್‌ಗಳಲ್ಲಿ 92 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಹಾಗಾಗಿ, ಎಡಗೈ ಸ್ವಿಂಗ್ ಬೌಲ‌ರ್ ಅರ್ಶ್‌ದೀಪ್ ಸಿಂಗ್ ಆಡುವುದು ಖಚಿತ.

ಆದರೆ, ಇಂದಿನ ಪಂದ್ಯದಲ್ಲಿ ಭಾರತ ಬದಲಾವಣೆಗಳೊಂದಿಗೆ ಬರುವುದು ಖಚಿತವಾಗಿದ್ದು, ಸದ್ಯ ಆರಂಭಿಕ ಜೋಡಿಯಲ್ಲಿ ಯಾವುದೇ ಬದಲಾವಣೆಗೆ ಕೈ ಹಾಕದೇ, ಮಧ್ಯಮ ಕ್ರಮಾಂಕದಲ್ಲಿ ಜಿತೇಶ್ ಶರ್ಮಾ ಅವರನ್ನು ಆಡಿಸುವ ಸಾಧ್ಯತೆಗಳಿವೆ. ಇದೇ ರೀತಿನಡೆದರೆ ಸಂಜು ಫೀಲ್ಡರ್ ಕಂ ಬ್ಯಾಟರ್ ಆಗಬಹುದು. ಒಮ್ಮೆ ಜಿತೇಶ್ ಬಾಂಗ್ಲಾ ಎದುರು ಅಬ್ಬರಿಸಿದರೆ, ಭಾರತ ಗೆಲ್ಲಬಹುದು.

ಸಂಭವನೀಯ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ) ಅಭಿಷೇಕ್ ಶರ್ಮಾ, ಶುಭಮನ್ ಗಿಲ್ ತಿಲಕ್ ವರ್ಮಾ, ಜಿತೇಶ್ ಶರ್ಮಾ, ಹಾರ್ದಿಕ್ ಪಾಂಡ್ಯ, ಕುಲ್‌ದೀಪ್, ಸಂಜು ಸ್ಯಾಮ್ಸನ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್.

ಸಂಜು ಸ್ಯಾಮನ್‌ಗೆ 5ನೇ ಸ್ಥಾನ ಭದ್ರ; ಕೋಚ್: ಈ ಪಂದ್ಯದಲ್ಲಿ ವಿಕೆಟ್ ಕೀಪ‌ರ್ ಬದಲಾಗಬಹುದೆಂಬ ಅನುಮಾನಕ್ಕೆ ಶನಿವಾರದ ಸುದ್ದಿಗೋಷ್ಠಿಯಲ್ಲಿ ನಾಯಕ ಸೂರ್ಯಕುಮಾರ್ ಹಾಗೂ ಕೋಚ್ ಗೌತಮ್ ಗಂಭೀರ್ ಸ್ಪಷ್ಟಪಡಿಸಿದ್ದಾರೆ. ಸಂಜು ಸ್ಯಾಮ್ಸನ್ ಮೇಲೆ ಅಚಲ ನಂಬಿಕೆಯನ್ನಿಟ್ಟಿರುವ ಗಂಭೀರ್, ಸಂಜು ಸತತ 20 ಬಾರಿ ಡಕ್ ಗಳಿಸಿದರೂ ಅವರನ್ನು ಕೈಬಿಡುವುದಿಲ್ಲ ಎಂದು ಆಗಸ್ಟ್‌ನಲ್ಲಿ ಬಹಿರಂಗಪಡಿಸಿದ್ದರು.

ವಿಕೆಟ್ ಕೀಪರ್ ಅವರನ್ನು ಆರಂಭಿಕ ಸ್ಥಾನದಿಂದ ತೆಗೆದುಹಾಕಲಾಗಿದ್ದರೂ, ಸ್ಯಾಮ್ಸನ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಲು ಬೆಂಬಲಿಸಲಾಗಿದೆ. ಭಾರತದ ಸಹಾಯಕ ಕೋಚ್ ರಯಾನ್ ಟಿನ್ ಡೋಸ್ಚೇಟ್ ಸ್ಯಾಮ್ಸನ್ ಅವರನ್ನು ಐದನೇ ಸ್ಥಾನದಲ್ಲಿರಲು ಮ್ಯಾನೇಜ್ ಮೆಂಟ್ ಇನ್ನೂ ಉತ್ತಮ ಆಯ್ಕೆಯಾಗಿ ನೋಡುತ್ತದೆ.

ಭಾರತವನ್ನು ಕೆಣಕಿದ ಬಾಂಗ್ಲಾ ಕೋಚ್:  “ಪ್ರತಿಯೊಂದು ತಂಡವೂ ಭಾರತವನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ. ಪಂದ್ಯವನ್ನು ಆ ದಿನದಂದೇ ಆಡಲಾಗುತ್ತದೆ. ಆ ಮೂರುವರೆ ಗಂಟೆಗಳ ಅವಧಿಯಲ್ಲಿ ನಡೆಯುವುದೇ ಹಾಗೆ, ನಾವು ಸಾಧ್ಯವಾದಷ್ಟು ಉತ್ತಮವಾಗಿ ಆಡಲು ಪ್ರಯತ್ನಿಸುತ್ತೇವೆ ಮತ್ತು ಭಾರತದ ಶಸ್ತ್ರಾಗಾರದಲ್ಲಿ ಯಾವುದೇ ನ್ಯೂನತೆಗಳಿಲ್ಲ ಎಂದು ಭಾವಿಸುತ್ತೇವೆ”.ಎಂದಿದ್ದಾರೆ ಬಾಂಗ್ಲಾ ಕೋಚ್ ಫಿಲ್ ಸಿಮನ್ಸ್. 

ಏಷ್ಯಾಕಪ್‌ನಲ್ಲಿ 15 ಬಾರಿ ಮುಖಾಮುಖಿ: ಭಾರತ 13 ಗೆಲುವುಸಾದಿಸಿದೆ. ಬಾಂಗ್ಲಾ 02 ಗೆಲುವುಸಾದಿಸಿದೆ.

ಪಂದ್ಯ ಆರಂಭ: ರಾತ್ರಿ 8 ಗಂಟೆಗೆ, ಸ್ಥಳ: ದುಬೈ ಅಂ.ರಾ, ಕ್ರಿಕೆಟ್ ಸ್ಟೇಡಿಯಂ

NO COMMENTS

LEAVE A REPLY

Please enter your comment!
Please enter your name here

Exit mobile version