Home ಕ್ರೀಡೆ India-England 5th Test: ಟಾಸ್‌ ಸೋತ ಭಾರತ, ಆರಂಭದಲ್ಲೇ ಶಾಕ್‌!

India-England 5th Test: ಟಾಸ್‌ ಸೋತ ಭಾರತ, ಆರಂಭದಲ್ಲೇ ಶಾಕ್‌!

0

ಲಂಡನ್‌: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಐದನೇ ಹಾಗೂ ಕೊನೆಯ ಪಂದ್ಯದಲ್ಲಿ ಭಾರತ ಮಾಡು ಇಲ್ಲವೇ ಮಡಿ ಹೋರಾಟ ಆರಂಭಿಸಿದೆ.

ಕೆನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು, ನಾಯಕ ಬೆನ್‌ ಸ್ಟೋಕ್ಸ್‌ ಗಾಯಗೊಂಡು ತಂಡದಿಂದ ಹೊರಗುಳಿದ ಕಾರಣ ಇಂಗ್ಲೆಂಡ್‌ ತಂಡದ ಹಂಗಾಮಿ ನಾಯಕ ಒಲ್ಲಿ ಪೋಪ್‌ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವ ಅವಕಾಶವನ್ನು ಪಡೆದುಕೊಂಡಿದೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಕೇವಲ 2 ರನ್‌ ಗಳಿಸಿ ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿ ಹೊರನಡೆದಿದ್ದಾರೆ.

ಐದು ಪಂದ್ಯಗಳ ಟೆಸ್ಟ್‌ ಸರಣಿಯಲಿ 2-1 ಮುನ್ನಡೆ ಸಾಧಿಸಿರುವ ಇಂಗ್ಲೆಂಡ್‌ ತಂಡಕ್ಕೆ ಈ ಪಂದ್ಯವೂ ಕೂಡ ನಿರ್ಣಾಯಕವಾಗಿದೆ. ಇಂಗ್ಲೆಂಡ್‌ ಪಂದ್ಯವನ್ನು ಗೆದ್ದರೆ ಅಥವಾ ಭಾರತ ಸೋತರೆ ಸರಣಿ ಇಂಗ್ಲೆಂಡ್‌ ಪಾಲಾಗಲಿದೆ.

ಈಗಾಗಲೇ ಸರಣಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿರುವ ಭಾರತಕ್ಕೆ ತಂಡ ಈ ಪಂದ್ಯವನ್ನು ಗೆದ್ದು ಡ್ರಾ ಮಾಡಿಕೊಳ್ಳಲು ಎದುರು ನೋಡುತ್ತಿದೆ. ಭಾರತ ಪಂದ್ಯ ಜಯಸಿದರೆ ಸರಣಿ 2-2 ರಿಂದ ಸಮಬಲದೊಂದಿಗೆ ಅಂತ್ಯಗೊಳ್ಳಲಿದೆ

ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಗಾಯಗೊಂಡಿರುವ ರಿಷಭ್‌ ಪಂತ್‌ ಈ ಪಂದ್ಯದಿಂದ ಹೊರಗುಳಿದಿದ್ದು ಅವರ ಸ್ಥಾನದಲ್ಲಿ ಕರುಣ್‌ ನಾಯರ್‌ ಅವಕಾಶ ಪಡೆದಿದ್ದಾರೆ. ಅಲ್ಲದೇ ಶಾರ್ದುಲ್‌ ಠಾಕೂರ್‌ ಬದಲು ಧ್ರುವ್‌ ಜುರೆಲ್‌ ಮತ್ತು ವಿಶ್ರಾಂತಿ ಪಡೆದಿರುವ ಜಸ್‌ಪ್ರೀತ್‌ ಬುಮ್ರಾ ಸ್ಥಾನದಲ್ಲಿ ಪ್ರಸಿದ್ ಕೃಷ್ಣ‌ ಮೈದಾನಕ್ಕೆ ಇಳಿಯಲಿದ್ದಾರೆ.

ಇನ್ನು ಇಂಗ್ಲೆಂಡ್‌ ತಂಡದ ಪ್ಲೇಯಿಂಗ್ 11 ಪಟ್ಟಿಯಲ್ಲಿ ಜೋಫ್ರಾ ಆರ್ಚರ್, ಲಿಯಾಮ್ ಡಾಸನ್ ಮತ್ತು ಬ್ರೈಡನ್ ಕಾರ್ಸ್ ಅವರನ್ನೂ ಕೂಡ ಕೈ ಬಿಡಲಾಗಿದ್ದು, ಅವರ ಸ್ಥಾನದಲ್ಲಿ ಗಸ್ ಅಟ್ಕಿನ್ಸನ್, ಜಾಕೋಬ್ ಬೆಥೆಲ್ ಮತ್ತು ಜೇಮಿ ಓವರ್ಟನ್ ತಂಡವನ್ನು ಸೇರಿಕೊಂಡಿದ್ದಾರೆ.

ಸರಣಿಯಲ್ಲಿ ಆಲ್‌ರೌಂಡ ಪ್ರದರ್ಶನ ನೀಡಿರುವ ನಾಯಕ ಬೆನ್ ಸ್ಟೋಕ್ಸ್ ಬಲ ಭುಜದ ಗಾಯದಿಂದಾಗಿ ಹೊರಗುಳಿದಿರುವುದು ಇಂಗ್ಲೆಂಡ್‌ ತಂಡಕ್ಕೆ ಭಾರೀ ಹೊಡೆತ ಬಿದ್ದಂತಾಗಿದೆ.

ಭಾರತ ತಂಡ: ಯಶಸ್ವಿ ಜೈಸ್ವಾಲ್‌, ಕೆಎಲ್‌ ರಾಹುಲ್‌, ಸಾಯಿ ಸುದರ್ಶನ್‌, ಶುಭಮನ್‌ ಗಿಲ್‌ (ನಾಯಕ), ಕರುಣ್‌ ನಾಯರ್‌, ಧ್ರುವ್‌ ಜುರೆಲ್‌ (ವಿಕೆಟ್‌ ಕೀಪರ್‌), ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌, ಆಕಾಶ ದೀಪ್‌, ಪ್ರಸಿಧ್‌ ಕೃಷ್ಣ, ಮೊಹಮ್ಮದ್‌ ಸಿರಾಜ್‌

ಇಂಗ್ಲೆಂಡ್‌ ತಂಡ: ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್(ನಾಯಕ), ಜೋ ರೂಟ್, ಹ್ಯಾರಿ ಬ್ರೂಕ್, ಜಾಕೋಬ್ ಬೆಥೆಲ್, ಜೇಮೀ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಜೇಮೀ ಓವರ್ಟನ್ ಮತ್ತು ಜೋಶ್ ಟಂಗ್.

NO COMMENTS

LEAVE A REPLY

Please enter your comment!
Please enter your name here

Exit mobile version