ಫುಟ್ಬಾಲ್ ದಿಗ್ಗಜ ಮೆಸ್ಸಿ ತಂದೆ ಜಾರ್ಜ್ ಇನ್ನಿಲ್ಲ

ರೊಸಾರಿಯೊ: ಅರ್ಜೆಂಟಿನಾ ಫುಟ್ಬಾಲ್ ದಿಗ್ಗಜ ಲಿಯೊನೆಲ್ ಮೆಸ್ಸಿ ಅವರ ತಂದೆ ಹಾಗೂ ಏಜೆಂಟ್ ಜಾರ್ಜ್ ಮೆಸ್ಸಿ (68) ನಿಧನರಾಗಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಅರ್ಜೆಂಟಿನಾದ ರೊಸಾರಿಯೊದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಜಾರ್ಜ್ ಮೆಸ್ಸಿ ಅವರು ಲಿಯೊನೆಲ್ ಅವರ ಫುಟ್ಬಾಲ್ ವೃತ್ತಿಜೀವನದ ಆರಂಭದಿಂದಲೂ ಪ್ರಮುಖ ಬೆಂಬಲವಾಗಿ ನಿಂತಿದ್ದರು. ಮಗನ ವೃತ್ತಿಜೀವನ ಬೆಳೆಯುತ್ತಿದ್ದಂತೆ ಕ್ಲಬ್‌ಗಳು ಹಾಗೂ ವಾಣಿಜ್ಯ ಸಂಸ್ಥೆಗಳೊಂದಿಗಿನ ಒಪ್ಪಂದ ಮತ್ತು ಮಾತುಕತೆಗಳನ್ನು ನೋಡಿಕೊಳ್ಳುತ್ತಿದ್ದ ಅವರು, ಮೈದಾನದ ಹೊರಗಿನ ಮೆಸ್ಸಿ ಅವರ ವ್ಯವಹಾರಿಕ ಜವಾಬ್ದಾರಿಗಳನ್ನೂ ನಿರ್ವಹಿಸುತ್ತಿದ್ದರು. ಬಾಲ್ಯದಲ್ಲಿ ರೊಸಾರಿಯೊದ … Continue reading ಫುಟ್ಬಾಲ್ ದಿಗ್ಗಜ ಮೆಸ್ಸಿ ತಂದೆ ಜಾರ್ಜ್ ಇನ್ನಿಲ್ಲ