Home ಕ್ರೀಡೆ ಸಬ್ ಜೂನಿಯರ್ ಖೋಖೋ : ರಾಜ್ಯ ತಂಡಕ್ಕೆ ಲೇಖನ‌ ಆಯ್ಕೆ

ಸಬ್ ಜೂನಿಯರ್ ಖೋಖೋ : ರಾಜ್ಯ ತಂಡಕ್ಕೆ ಲೇಖನ‌ ಆಯ್ಕೆ

0

ಶ್ರೀರಂಗಪಟ್ಟಣ: ಅ.06 ರಿಂದ 08 ರವರೆಗೆ ತಮಿಳುನಾಡಿನಲ್ಲಿ ನಡೆಯಲಿರುವ ಬಾಲಕಿಯರ ಸಬ್ ಜೂನಿಯರ್ ಸೌತ್ ಝೋನ್ ಖೋ ಖೋ ಪಂದ್ಯಾವಳಿಯ ಕರ್ನಾಟಕ‌ ತಂಡಕ್ಕೆ ಲೇಖನ.ಎಸ್ ಆಯ್ಕೆಗೊಂಡಿದ್ದಾರೆ.
ಪಾಂಡವಪುರ ತಾಲ್ಲೂಕು ಕ್ಯಾತನಹಳ್ಳಿ ಗ್ರಾಮದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ಶ್ರೀರಂಗಪಟ್ಟಣದ ನ್ಯೂ ಆಕ್ಸ್ ಫರ್ಡ್ ಶಾಲೆಯ ವಿದ್ಯಾರ್ಥಿನಿ‌ ಲೇಖನ ಆಯ್ಕೆಗೊಂಡಿದ್ದಾರೆ.
ಶ್ರೀರಂಗಪಟ್ಟಣ, ಪಾಂಡವಪುರ, ಮೈಸೂರು, ಮಂಡ್ಯ, ಮದ್ದೂರು, ಮಳವಳ್ಳಿ, ಮೈಸೂರು, ತುಮಕೂರು, ಬೆಂಗಳೂರು, ಬಳ್ಳಾರಿ, ಹೊಸಪೇಟೆ, ವಿಜಯಪುರ ಸೇರಿದಂತೆ ರಾಜ್ಯಾದ್ಯಂತ ವಿವಿದೆಡೆಗಳಿಂದ ಒಟ್ಟು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ ವತಿಯಿಂದ ಆಗಮಿಸಿದ್ದ ತೀರ್ಪುಗಾರರು, ಹಲವು ಸುತ್ತುಗಳ ಪ್ರದರ್ಶನದ ಬಳಿಕ ಅಂತಿಮವಾಗಿ 18 ವಿದ್ಯಾರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ.
ಆಯ್ಕೆಗೊಂಡಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಕ್ಯಾತನಹಳ್ಳಿ ಕ್ರೀಡಾ ಕ್ಲಬ್ ವತಿಯಿಂದ ಒಂದು ವಾರಗಳ ಕಾಲ ತರಭೇತುದಾರ ಮನೋಹರ್ ರವರು ತರಭೇತಿ ನೀಡುತ್ತಿದ್ದು, ಅ.05 ರಂದು ತಮಿಳುನಾಡಿಗೆ ರಾಜ್ಯ ತಂಡದ ವಿದ್ಯಾರ್ಥಿನಿಯರು ಪ್ರಯಾಣ ಬೆಳೆಸಲಿದ್ದಾರೆ.


ರಾಜ್ಯ ತಂಡಕ್ಕೆ ಆಯ್ಕೆಗೊಂಡ ಶ್ರೀರಂಗಪಟ್ಟಣದ ಲೇಖನರನ್ನು ಶಾಲಾ ಆಡಳಿತ ಮಂಡಳಿ ಹಾಗೂ ತಾಲ್ಲೂಕಿನ ವಿವಿಧ ಸಂಘಟನೆಗಳು ಹಾಗೂ ಮುಖಂಡರು‌ ಅಭಿನಂಧನೆ ತಿಳಿಸಿದ್ದಾರೆ.

https://samyuktakarnataka.in/%e0%b2%97%e0%b2%a3%e0%b3%87%e0%b2%b6%e0%b2%a8%e0%b2%bf%e0%b2%97%e0%b3%86-%e0%b2%95%e0%b3%88%e0%b2%b9%e0%b2%bf%e0%b2%a1%e0%b2%bf%e0%b2%a6-%e0%b2%ae%e0%b3%81%e0%b2%82%e0%b2%97%e0%b2%be%e0%b2%b0%e0%b3%81/

Exit mobile version