Home ಕ್ರೀಡೆ ಪುರುಷರಲ್ಲಿ ಬಾಗಲಕೋಟ ತಂಡ ಮಹಿಳೆಯರಲ್ಲಿ ಕಲಬುರಗಿ ತಂಡ ಟೇಬಲ್ ಟೆನ್ನಿಸ್ ಚಾಂಪಿಯನ್

ಪುರುಷರಲ್ಲಿ ಬಾಗಲಕೋಟ ತಂಡ ಮಹಿಳೆಯರಲ್ಲಿ ಕಲಬುರಗಿ ತಂಡ ಟೇಬಲ್ ಟೆನ್ನಿಸ್ ಚಾಂಪಿಯನ್

0

ಇಳಕಲ್: ಎರಡು ದಿನಗಳ ಕಾಲ ಇಲ್ಲಿನ ಎಸ್.ವ್ಹಿ.ಎಮ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ನಡೆಸಿದ ಕಲಬುರ್ಗಿ ವಲಯದ ಟೇಬಲ್ ಟೆನಿಸ್ಸ್ ಪಂದ್ಯಾವಳಿಯಲ್ಲಿ ಪುರುಷರ ಚಾಂಪಿಯನ್‌ಶಿಪ್‌ನ್ನು ಬಾಗಲಕೋಟೆಯ ಎಸ್ ಎನ್ ವೈಧ್ಯಕೀಯ ಮಹಾವಿದ್ಯಾಲಯ ಪಡೆದರೆ ಮಹಿಳೆಯರಲ್ಲಿ ಕಲಬುರಗಿಯ ಎಮ್.ಆರ್ ವೈದ್ಯಕೀಯ ಮಹಾವಿದ್ಯಾಲಯ ಪಡೆದುಕೊಂಡವು
ಸ್ಥಳಿಯ ಮಹಾಂತ ಗಂಗೋತ್ರಿ ಆವರಣದಲ್ಲಿ ರಾಜೀವ್ ಗಾಂಧಿ ವಿಶ್ವ ವಿದ್ಯಾಲಯ ಬೆಂಗಳೂರ ಹಾಗೂ ಎಸ್.ವ್ಹಿ.ಎಮ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದೊಂದಿಗೆ ಜರುಗಿದ ಪಂದ್ಯಾವಳಿಯಲ್ಲಿ ಪುರಷರ ಟೇಬಲ್ ಟೆನಿಸ್ ಆಟದಲ್ಲಿ ಪ್ರಥಮ ಸ್ಥಾನವನ್ನು ಎಸ್,ಎನ್ ವೈದ್ಯಕೀಯ ಮಹಾವಿದ್ಯಾಲಯ ಬಾಗಲಕೋಟ, ದ್ವಿತೀಯ ಸ್ಥಾನವನ್ನು ಬೀದರ ವೈದ್ಯಕೀಯ ಮಹಾವಿದ್ಯಾಲಯ ಪಡೆದುಕೊಂಡವು


ಮಹಿಳಾ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಎಮ್.ಆರ್ ವೈದ್ಯಕೀಯ ಮಹಾವಿದ್ಯಾಲಯ ಕಲಬುರಗಿ, ದ್ವಿತೀಯ ಸ್ಥಾನವನ್ನು ಎಸ್.ಎನ್. ವೈದ್ಯಕೀಯ ಮಹಾವಿದ್ಯಾಲಯ ಬಾಗಲಕೋಟ ಅವರು ಗೆದ್ದು ವಿಜಯೋತ್ಸವನ್ನು ಆಚರಿಸಿದರು.


ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾದ್ಯಾಪಕ ಶಿವಾನಂದ ಮುಚಕಂಡಿ ಆಯುರ್ವೇದ ಮಹಾವಿದ್ಯಾಲಯದ ಚೇರಮನ್ ಎಮ್.ಜಿ.ಪಟ್ಟಣಶೆಟ್ಟಿರ್ ಪ್ರಾಚಾರ್ಯ ಡಾ. ಕೆ.ಸಿ.ದಾಸ್ , ಉಪಪ್ರಾಚಾರ್ಯ ಹಾಗೂ ಸಿನೆಟ್ ಸದಸ್ಯ ಡಾ .ಪ್ರಕಾಶ್ ತಾರಿವಾಳ, ಕಲಬುರ್ಗಿ ವಲಯದ ಸಂಯೋಜಕ ನೇತಾನಿಲ್ ದೈಹಿಕ ನಿರ್ದೆಶಕರಾದ ಡಾ.ಜಗದೀಶ್ ಹೂಲಗೇರಿ ಉಪಸ್ಥಿತರಿದ್ದರು

Exit mobile version