Home ನಮ್ಮ ಜಿಲ್ಲೆ ಕೊಪ್ಪಳ SSLCಯಲ್ಲಿ 623 ಅಂಕ ಪಡೆದ ಸರ್ಕಾರಿ ನೌಕರನಿಗೆ ಓದು, ಬರಹವೇ ಬರೊಲ್ಲ!

SSLCಯಲ್ಲಿ 623 ಅಂಕ ಪಡೆದ ಸರ್ಕಾರಿ ನೌಕರನಿಗೆ ಓದು, ಬರಹವೇ ಬರೊಲ್ಲ!

0

ಕೊಪ್ಪಳ: ಎಸ್ಸೆಸ್ಸೆಲ್ಸಿಯಲ್ಲಿ 625 ಅಂಕಗಳಿಗೆ ಬರೋಬ್ಬರಿ 623 ಅಂಕಗಳನ್ನು ಪಡೆದು ನ್ಯಾಯಾಲಯದಲ್ಲಿ ಕೆಲಸ ಪಡೆದ ಯುವಕನಿಗೆ ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಯಾವುದೇ ಭಾಷೆಯನ್ನು ಓದಲು, ಬರೆಯಲು ಬರುವುದಿಲ್ಲ ಇದರಿಂದ ಅನುಮಾನಗೊಂಡ ಕೊಪ್ಪಳದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಪ್ರಭು ವಿದ್ಯಾಭ್ಯಾಸದ ಕುರಿತು ವಿಚಾರಣೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಇದರ ಅನ್ವಯ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.
ಕೊಪ್ಪಳದಲ್ಲಿ ಓದು ಬರಹ ಬರದದಿದ್ದರೂ ಎಸ್ಸೆಸ್ಸೆಲ್ಸಿಯಲ್ಲಿ 625 ಅಂಕಗಳಿಗೆ ಬರೋಬ್ಬರಿ 623 ಅಂಕಗಳನ್ನು ಪಡೆದು, ಜಿಲ್ಲಾ ನ್ಯಾಯಾಲಯದಲ್ಲಿ ನೌಕರಿಯನ್ನೂ ಪಡೆದುಕೊಂಡಿದ್ದನು. ನೌಕರಿ ಪಡೆದ ಯುವಕನನ್ನು ಕೊಪ್ಪಳದ ಪ್ರಭು ಲಕ್ಷ್ಮೀಕಾಂತ ಲೋಕರೆ ಎಂದು ಗುರುತಿಸಲಾಗಿದೆ. ಈತನಿಗೆ ವಾಸ್ತವದಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಯಾವುದೇ ಭಾಷೆಯನ್ನು ಓದಲು ಹಾಗೂ ಬರೆಯಲು ಬುರುವುದೇ ಇಲ್ಲ. ಆದರೂ ಎಸ್ಸೆಸ್ಸೆಲ್ಸಿಯಲ್ಲಿ 623 ಅಂಕಗಳನ್ನು ಪಡೆದು ಜೆಎಂಎಫ್ ಸಿ ಕೋರ್ಟ್ ನಲ್ಲಿ ಸ್ಕ್ಯಾವೆಂಜರ್ ಆಗಿ ನೌಕರಿ ಪಡೆದು ಕಾರ್ಯ ನಿರ್ವಹಿಸುತ್ತಿದ್ದಾನೆ. ಮುಂದುವರೆದು ಈಗ ಸರ್ಕಾರದ ಮತ್ತೊಂದು ನೇಮಕಾತಿಯಲ್ಲಿ ಅರ್ಹತೆ ಪಡೆದು ಯಾದಗಿರಿ ಜಿಲ್ಲೆಯ ಕೋರ್ಟ್‌ನಲ್ಲಿ ಜವಾನ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದಾನೆ. ಇದೆಲ್ಲವೂ ಹೇಗೆ ಸಾಧ್ಯ ಎಂದು ನ್ಯಾಯಾಧೀಶರು ಅನುಮಾನ ವ್ಯಕ್ತಪಡಿಸಿದ್ದಾರೆ.

Exit mobile version