ಹಗಲು ಧಿಕ್ಕಾರದ ಘೋಷಣೆ, ರಾತ್ರಿ ಹಾಡು–ಭಜನೆ; ಟೋಲ್‌ ನಾಕಾಗಳಲ್ಲೇ ರೈತರ ಅಹೋರಾತ್ರಿ ಧರಣಿ!

ಬೆಳಗಾವಿ: ಹಗಲಿಡೀ ಮೊಳಗಿದ ಧಿಕ್ಕಾರದ ಘೋಷಣೆಗಳು, ರಾತ್ರಿ ಮೊಳಗಿದ ಹಾಡು–ಭಜನೆಗಳು… ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಮೂರು ಟೋಲ್‌ ನಾಕಾಗಳಲ್ಲಿ ರೈತರು ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಬೇಡಿಕೆ ಈಡೇರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂಬ ಸಂಕಲ್ಪದೊಂದಿಗೆ ಹಿರೇಬಾಗೇವಾಡಿ, ಹತ್ತರಗಿ ಹಾಗೂ ನಿಪ್ಪಾಣಿ ಸಮೀಪದ ಕೊಗನೊಳ್ಳಿ ಟೋಲ್‌ ನಾಕಾಗಳಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ದಿನವಿಡೀ ಬೇಡಿಕೆಗಳ ಈಡೇರಿಕೆಗೆ ಘೋಷಣೆಗಳನ್ನು ಕೂಗಿದ ರೈತರು, ರಾತ್ರಿ ಕತ್ತಲು ಆವರಿಸಿದರೂ ಪ್ರತಿಭಟನಾ ಸ್ಥಳವನ್ನು ತೊರೆಯಲಿಲ್ಲ. ಬದಲಾಗಿ, ಹೋರಾಟದ ಕಾವನ್ನು ಕಾಯ್ದುಕೊಳ್ಳಲು ಹಾಡು, … Continue reading ಹಗಲು ಧಿಕ್ಕಾರದ ಘೋಷಣೆ, ರಾತ್ರಿ ಹಾಡು–ಭಜನೆ; ಟೋಲ್‌ ನಾಕಾಗಳಲ್ಲೇ ರೈತರ ಅಹೋರಾತ್ರಿ ಧರಣಿ!