Home ತಾಜಾ ಸುದ್ದಿ ಭ್ರಷ್ಟಾಚಾರ ಪ್ರಕರಣ; ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾಗೆ ಶಿಕ್ಷೆ ಖಚಿತ; ಕೇಂದ್ರ ಸಚಿವ ಜೋಶಿ ವಿಶ್ವಾಸ

ಭ್ರಷ್ಟಾಚಾರ ಪ್ರಕರಣ; ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾಗೆ ಶಿಕ್ಷೆ ಖಚಿತ; ಕೇಂದ್ರ ಸಚಿವ ಜೋಶಿ ವಿಶ್ವಾಸ

0

ಹುಬ್ಬಳ್ಳಿ : ಆಮ್ ಆದ್ಮಿ ಪಕ್ಷದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಯಾಗುವುದು ಖಚಿತ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷದ ನಾಯಕರು ತಾವೇ ಪರಿಶುದ್ಧರು ಎಂದು ಭಾವಿಸಿದ್ದಾರೆ. ಒಬ್ಬರ ಹಿಂದೊಬ್ಬರಂತೆ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಈಗಾಗಲೇ ಆಮ್ ಅದ್ಮಿ ಪಕ್ಷದ ಒಬ್ಬ ಮಂತ್ರಿ ಜೈಲಿನಲ್ಲಿ ಇದ್ದಾರೆ. ಅವರಿಗೆ ಜಾಮೀನೂ ಕೂಡಾ ಸಿಗುತ್ತಿಲ್ಲ ಎಂದರು.
ಈಗ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದಾರೆ. ಇವರ ವಿರುದ್ಧವೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಲವಾದ ಸಾಕ್ಷಿಗಳಿವೆ. ಅವರಿಗೆ ಶಿಕ್ಷೆ ಖಚಿತ ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

Exit mobile version