Home ಸುದ್ದಿ ರಾಜ್ಯ ರೈಲು ಸೇವೆಗಳಿಗೆ ‘ರೈಲ್ ಒನ್’ ಅಪ್ಲಿಕೇಶನ್ ಬಿಡುಗಡೆ: ವಿಶೇಷತೆಗಳು

ರೈಲು ಸೇವೆಗಳಿಗೆ ‘ರೈಲ್ ಒನ್’ ಅಪ್ಲಿಕೇಶನ್ ಬಿಡುಗಡೆ: ವಿಶೇಷತೆಗಳು

0

ಹುಬ್ಬಳ್ಳಿ: ರೈಲು ಪ್ರಯಾಣವನ್ನು ಹೆಚ್ಚು ಅನುಕೂಲಕರ, ಪರಿಣಾಮಕಾರಿ ಮತ್ತು ಪ್ರಯಾಣಿಕ ಸ್ನೇಹಿಯಾಗಿಸಲು, ಭಾರತೀಯ ರೈಲ್ವೆಯು ತನ್ನ ಕೋಟ್ಯಂತರ ಪ್ರಯಾಣಿಕರ ಅನುಕೂಲಕ್ಕಾಗಿ `ರೈಲ್ ಒನ್ ಮೊಬೈಲ್ ಅಪ್ಲಿಕೇಶನ್’ ಅನ್ನು ಬಿಡುಗಡೆ ಮಾಡಿದೆ.

ಈ ರೈಲ್ ಒನ್ ಮೊಬೈಲ್ ಅಪ್ಲಿಕೇಶನ್ ಎಲ್ಲಾ ರೈಲ್ವೆ ಸೇವೆಗಳನ್ನು ಒಂದೇ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಸಂಯೋಜಿಸುವ ಸಮಗ್ರ ಆಲ್-ಇನ್-ಒನ್ ಮೊಬೈಲ್ ಅಪ್ಲಿಕೇಶನ್ ಆಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ಟಿಕೆಟ್‌ಗಳು, ಪಿಎನ್‌ಆರ್ ಪರಿಶೀಲನೆ, ರೈಲಿನ ಲೈವ್ ಟ್ರ್ಯಾಕಿಂಗ್, ಬೋಗಿಗಳ ವಿವರ, ಟಿಕೆಟ್ ಮರುಪಾವತಿ, ದೂರುಗಳ ನೋಂದಣಿ ಸೇರಿದಂತೆ ವಿವಿಧ ಸೇವೆಗಳು ಒಂದೇ ಆ್ಯಪ್ ನಲ್ಲಿ ದೊರೆಯಲಿವೆ.

ಪ್ರಯಾಣಿಕರು ಈ `ರೈಲ್ ಒನ್ ಮೊಬೈಲ್ ಅಪ್ಲಿಕೇಶನ್’ ಡೌನ್‌ಲೋಡ್ ಮಾಡಿಕೊಂಡು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಪ್ರಯಾಣವನ್ನು ಸರಳಗೊಳಿಸುವ ನಿಟ್ಟಿನಲ್ಲಿ ರೈಲ್‌ ಒನ್ ಮೊಬೈಲ್ ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಈ ಏಕೀಕೃತ ಅಪ್ಲಿಕೇಶನ್ ಐಆರ್‌ಸಿಟಿ ರೈಲ್ ಕನೆಕ್ಟ್, ಯುಟಿಎಸ್ ಆನ್ ಮೊಬೈಲ್, ಎನ್‌ಟಿಇಸ್, ರೈಲ್ ಮದದ್ ಮತ್ತು ಫುಡ್ ಟ್ರ‍್ಯಾಕ್‌ನಂತಹ ಮೊಬೈಲ್ ಅಪ್ಲಿಕೇಶನ್‌ಗಳ ವೈಶಿಷ್ಟ್ಯಗಳನ್ನು ಒಟ್ಟುಗೂಡಿಸಿ ಬಿಡುಗಡೆಗೊಳಿಸಲಾಗಿದೆ.

ಐಆರ್‌ಸಿಟಿಸಿ ಮತ್ತು ಯುಟಿಎಸ್‌ನಲ್ಲಿ ಈಗಾಗಲೇ ನೋಂದಾಯಿಸಿರುವ ಬಳಕೆದಾರರು ಪ್ರತ್ಯೇಕ ನೋಂದಣಿ ಅಗತ್ಯವಿಲ್ಲದೆ ತಮ್ಮ ಪ್ರಸ್ತುತ ರುಜುವಾತುಗಳನ್ನು ಬಳಸಿಕೊಂಡು ರೈಲ್ ಒನ್ ಅಪ್ಲಿಕೇಶನ್‌ನಲ್ಲಿ ನೇರವಾಗಿ ಲಾಗಿನ್ ಮಾಡಬಹುದು.

ರೈಲ್ವೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳುನ್ನು ಒಂದೇ ವೇದಿಕೆಯಲ್ಲಿ ಪಡೆಯಲು ಇದು ಸಹಕಾರಿಯಾಗಲಿದ್ದು, ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಎರಡರಲ್ಲೂ ರೈಲ್ ಒನ್ ಮೊಬೈಲ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಲು ಲಭ್ಯವಿದೆ. ಸದ್ಯ ರೈಲ್ವೆಯ ಆಂತರಿಕ ಡಿಜಿಟಲ್ ಪಾವತಿ ವ್ಯವಸ್ಥೆ ಆರ್ ವ್ಯಾಲೆಟ್‌ನೊಂದಿಗೆ ರೈಲ್ ಒನ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಿದ ಕಾಯ್ದಿರಿಸದ ಟಿಕೆಟ್‌ಗಳ ಮೇಲೆ ಪ್ರತಿಶತ 3ರಷ್ಟು ರಿಯಾಯಿತಿ ದೊರೆಯಲಿದೆ.

ಟಿಕೆಟ್ ಬುಕಿಂಗ್: ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಆಸನಗಳನ್ನು ಪರಶೀಲಿಸಲು ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಸುಲಭವಾಗಿ ಪಡೆಯಬಹುದು.

ಪಿಎನ್‌ಆರ್ ಪರಿಶೀಲನೆ: ಕಾಯ್ದಿರಿಸಿದ ರೈಲ್ವೆ ಟಿಕೆಟ್‌ನ ಪಿಎನ್‌ಆರ್ ಮಾಹಿತಿಯನ್ನು ನೈಜ ಸಮಯದಲ್ಲಿ ಪರಿಶೀಲಿಸಬಹುದು.

ರೈಲಿನ ಲೈವ್ ಟ್ರ್ಯಾಕಿಂಗ್: ಪ್ರಸ್ತುತ ರೈಲುಗಳ ಯಾವ ನಿಲ್ದಾಣದಲ್ಲಿವೆ, ಕೋಚ್ ಸಂಖ್ಯೆ, ತಲುಪುವ ಸಮಯ ಸೇರಿದಂತೆ ರೈಲುಗಳ ಕ್ಷಣಕ್ಷಣದ ಮಾಹಿತಿ ದೊರೆಯುತ್ತದೆ.

ಫುಡ್‌ ಆರ್ಡರ್: ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಆಹಾರವನ್ನು ಕೂಡ ಆರ್ಡರ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ದೂರುಗಳ ನೋಂದಣಿ: ರೈಲ್ವೆ ಪ್ರಯಾಣದ ವೇಳೆ ಈ ಅಪ್ಲಿಕೇಶನ್‌ ಮೂಲಕ ಪ್ರಯಾಣಿಕರು ರೈಲ್ವೆಗೆ ಸಂಬಂಧಿಸಿದ ದೂರುಗಳ ನೋಂದಣಿ ಮಾಡಬಹುದಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version