
ಸಾರ್ವಜನಿಕರು ಕಸದ ತೊಟ್ಟಿಯಿಂದ ಮಿಠಾಯಿ ತೆಗೆದ ವಿಡಿಯೋ ವೈರಲ್
ಲಖ್ನೋ: ಹೋಳಿ ಹಬ್ಬದ ಮುನ್ನಾದಿನ ಆಹಾರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆಹಾರ ಸುರಕ್ಷತಾ ನಿರೀಕ್ಷಕರು (FSSAI) ಹಾಗೂ (UPFSDA) ಸಂಯುಕ್ತವಾಗಿ ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಭರ್ಜರಿ ದಾಳಿ ನಡೆಸಿವೆ.
ಹಾಪುರದಲ್ಲಿ ಸಿಹಿತಿಂಡಿ ಅಂಗಡಿಗಳ ಮೇಲೆ ದಾಳಿ: Hapur ನಗರದ ಮಿನಾಕ್ಷಿ ರಸ್ತೆ ಭಾಗದಲ್ಲಿರುವ ಹಲವಾರು ಸಿಹಿತಿಂಡಿ ಅಂಗಡಿಗಳ ಮೇಲೆ ಆಹಾರ ಸುರಕ್ಷತಾ ನಿರೀಕ್ಷಕರು ದಾಳಿ ನಡೆಸಿದರು. ಹಬ್ಬದ ರಶ್ ಹಿನ್ನೆಲೆ ಮಾರಾಟಕ್ಕೆ ಇಡಲಾಗಿದ್ದ ಕೆಲವು ಮಿಠಾಯಿಗಳು ಅನುಮಾನಾಸ್ಪದ ಗುಣಮಟ್ಟದವು ಎಂದು ಪತ್ತೆಯಾದ ಹಿನ್ನೆಲೆಯಲ್ಲಿ ಅವನ್ನು ವಶಪಡಿಸಿಕೊಂಡು ಪುರಸಭೆಯ ಕಸದ ತೊಟ್ಟಿಗೆ ತಳ್ಳಲಾಯಿತು.
ಇದನ್ನೂ ಓದಿ: ಮಾರ್ಚ್ 3ಕ್ಕೆ ‘Blood Moon’: ಫಾಲ್ಗುಣ ಪೂರ್ಣಿಮೆಗೆ ಖಗೋಳ ಅದ್ಭುತ
ಆದರೆ ಈ ಕ್ರಮದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಯಿತು. ಅಧಿಕಾರಿಗಳು ತೆರಳಿದ ಬಳಿಕ, ಕೆಲ ಸ್ಥಳೀಯರು ಅದೇ ಕಸದ ತೊಟ್ಟಿಯಿಂದ ಸಿಹಿತಿಂಡಿಗಳ ಪೆಟ್ಟಿಗೆಗಳನ್ನು ತೆಗೆದು ಹಂಚಿಕೊಂಡ ದೃಶ್ಯ ಜನರಲ್ಲಿ ಚರ್ಚೆಗೆ ಗ್ರಾಸವಾಯಿತು.
ಈ ಘಟನೆ ಎರಡು ಪ್ರಶ್ನೆಗಳನ್ನು ಎಬ್ಬಿಸಿದೆ: ಬಡತನ ಮತ್ತು ಹಸಿವಿನ ಸಮಸ್ಯೆಯ ಸ್ಪಷ್ಟ ಚಿತ್ರಣವೇ? ಅಥವಾ ವಶಪಡಿಸಿಕೊಂಡ ಆಹಾರವನ್ನು ನಾಶಪಡಿಸುವ ಕ್ರಮದಲ್ಲಿ ಲೋಪವಿದೆಯೇ?
ಇದನ್ನೂ ಓದಿ: ಸುಪ್ರೀಂ ಕೋರ್ಟ್ನಲ್ಲಿ ವಿನಯ ಕುಲಕರ್ಣಿಗೆ ಬಿಗ್ ರಿಲೀಫ್
ಹಲವರು ಅಧಿಕಾರಿಗಳು ವಶಪಡಿಸಿಕೊಂಡ ಆಹಾರವನ್ನು ಕೇವಲ ಕಸದ ಬುಟ್ಟಿಗೆ ಎಸೆಯದೇ, ಸುರಕ್ಷಿತವಾಗಿ ಸುಡುವುದು ಅಥವಾ ವೈಜ್ಞಾನಿಕವಾಗಿ ನಾಶಪಡಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾನ್ಪುರದಲ್ಲಿ ಭಾರಿ ಪ್ರಮಾಣದ ಕಲಬೆರಕೆ ಪತ್ತೆ: ಕಾನ್ಪುರನಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಅಧಿಕಾರಿಗಳು 13,972 ಲೀಟರ್ಗಳಿಗೂ ಹೆಚ್ಚು ಕಲಬೆರಕೆ ಎಣ್ಣೆ ಹಾಗೂ 1,350 ಕಿಲೋಗ್ರಾಂ ಬಣ್ಣದ ತ್ಯಾಜ್ಯ ವಶಪಡಿಸಿಕೊಂಡಿದ್ದಾರೆ. ಇದಲ್ಲದೆ, ಕಲ್ಯಾಣಪುರ ಪ್ರದೇಶದಲ್ಲಿನ ನಕಲಿ ತುಪ್ಪ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ ₹5.45 ಲಕ್ಷ ಮೌಲ್ಯದ ಸರಕುಗಳನ್ನು ಜಪ್ತಿ ಮಾಡಲಾಗಿದೆ. ಎಲ್ಲಾ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬಾಗೇಪಲ್ಲಿ ಶಾಸಕ ಸ್ಥಾನ ರದ್ದು ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
ಲಖ್ನೋ ಹಾಗೂ ಇತರ ನಗರಗಳಲ್ಲಿ ದಾಳಿಗಳು: ಲಖ್ನೋ ಸೇರಿದಂತೆ ಹಲವು ನಗರಗಳಲ್ಲಿ ಹಬ್ಬದ ಸೀಸನ್ ಆರಂಭವಾಗುತ್ತಿದ್ದಂತೆಯೇ ಅನಿರೀಕ್ಷಿತ ದಾಳಿಗಳು ನಡೆಯುತ್ತಿವೆ. ರಂಜಾನ್ ಹಾಗೂ ಹೋಳಿ ಹಬ್ಬದ ಸಂದರ್ಭದಲ್ಲಿ ಕೋಲ್ಡ್ ಸ್ಟೋರೇಜ್ ಘಟಕಗಳು, ಡೈರಿಗಳು ಮತ್ತು ಆಹಾರ ಗೋದಾಮುಗಳನ್ನು ಪರಿಶೀಲಿಸಲಾಗಿದೆ.
ಈ ವೇಳೆ 1,320 ಕಿಲೋ ಖರ್ಜೂರ, 1,418 ಕಿಲೋ ಬಣ್ಣದ ಕಚಾರಿಯನ್ನು ವಶಪಡಿಸಿಕೊಂಡಿದ್ದಾರೆ.
ರಾಜ್ಯ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ಪ್ರಕಾರ, ಮುಂದಿನ ದಿನಗಳಲ್ಲಿಯೂ ರಾಜ್ಯದಾದ್ಯಂತ ವಿಶೇಷ ತಪಾಸಣೆ ಮುಂದುವರಿಯಲಿದೆ. ಹಬ್ಬದ ಅವಧಿಯಲ್ಲಿ ಯಾವುದೇ ರೀತಿಯ ಆಹಾರ ಕಲಬೆರಕೆಯನ್ನು ಸಹಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ: ದೆಹಲಿ ಮದ್ಯ ನೀತಿ ಪ್ರಕರಣ: ಕೇಜ್ರಿವಾಲ್, ಸಿಸೋಡಿಯಾ ಸೇರಿ 23 ಮಂದಿಗೆ ಖುಲಾಸೆ
ಜನರು ಪ್ಯಾಕೇಜ್ ಮಾಡಿದ ಆಹಾರವನ್ನು ಖರೀದಿಸುವಾಗ FSSAI ಲೈಸೆನ್ಸ್ ಸಂಖ್ಯೆ, ಉತ್ಪಾದನಾ ದಿನಾಂಕ ಹಾಗೂ ಅವಧಿ ಪರಿಶೀಲಿಸಬೇಕು ಎಂದು ಸಲಹೆ ನೀಡಲಾಗಿದೆ.
ಮಿಠಾಯಿ ಅಥವಾ ಎಣ್ಣೆ ಉತ್ಪನ್ನಗಳನ್ನು ವಿಶ್ವಾಸಾರ್ಹ ಅಂಗಡಿಗಳಿಂದ ಮಾತ್ರ ಖರೀದಿಸಿ, ಅತಿಯಾಗಿ ಕಡಿಮೆ ಬೆಲೆಯ ಆಹಾರ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದಿರಿ, ಅನುಮಾನಾಸ್ಪದ ಆಹಾರ ಕಂಡರೆ ಸ್ಥಳೀಯ ಆಹಾರ ಸುರಕ್ಷತಾ ಕಚೇರಿಗೆ ಮಾಹಿತಿ ನೀಡಿ