Home ಸುದ್ದಿ ದೇಶ ಮೂರು ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಇಂದು ಚಾಲನೆ

ಮೂರು ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಇಂದು ಚಾಲನೆ

0

ನವದೆಹಲಿ: ದೇಶದ ರೈಲು ಸೇವೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟುಕೊಂಡಿದ್ದು, ಮೂರು ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕಾರ್ಯಾಚರಣೆ ಆರಂಭಿಸಲಿವೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ಹಂಚಿಕೊಂಡಿದ್ದು, ಇವು ಸೇರ್ಪಡೆಯಾದ ಬಳಿಕ ದೇಶದಲ್ಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಖ್ಯೆ ಒಟ್ಟು 30ಕ್ಕೆ ತಲುಪಿದೆ ಎಂದಿದ್ದಾರೆ.

ಬಿಹಾರದಲ್ಲಿ ರೈಲು ಸಂಪರ್ಕಕ್ಕೆ ಪ್ರಮುಖ ಉತ್ತೇಜನ ನೀಡುವ ಸಲುವಾಗಿ, ಸೆಪ್ಟೆಂಬರ್ 29 ರಂದು 3 ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಲಾಗುವುದು. ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣವನ್ನು ಸಂಪರ್ಕಿಸುವ ಈ ರೈಲುಗಳು ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಆರಾಮದಾಯಕ ಅನುಭವವನ್ನು ಒದಗಿಸುತ್ತವೆ. ಮೊದಲ ರೈಲು ಮುಜಫರ್‌ಪುರದಿಂದ ಚರ್ಲಪಲ್ಲಿ (ಹೈದರಾಬಾದ್ ಬಳಿ) ವರೆಗೆ ಚಲಿಸಲಿದ್ದು, ಉಳಿದ ಎರಡು ರೈಲುಗಳು ದರ್ಭಂಗಾದಿಂದ ಮದರ್ ಜಂಕ್ಷನ್ (ಅಜ್ಮೀರ್ ಬಳಿ) ವರೆಗೆ ಮತ್ತು ಛಪ್ರಾದಿಂದ ಆನಂದ್ ವಿಹಾರ್ ಟರ್ಮಿನಲ್ (ದೆಹಲಿ) ವರೆಗೆ ಚಲಿಸಲಿವೆ.

ಇದರೊಂದಿಗೆ ನಾಲ್ಕು ಪ್ಯಾಸೆಂಜರ್ ರೈಲುಗಳು ಸಹ ಆರಂಭವಾಗಲಿದ್ದು, ಒಟ್ಟು ಏಳು ರೈಲುಗಳಿಗೆ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಮತ್ತು ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಚಾಲನೆ ನೀಡಲಿದ್ದಾರೆ. ವೈಷ್ಣವ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಮುಖ್ಯವಾಗಿ ದೀರ್ಘ ದೂರದ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರ್ಥಿಕ ದರದಲ್ಲಿ ಉತ್ತಮ ವೇಗದ ರೈಲು ಸೇವೆ ಒದಗಿಸಲು ಆರಂಭಿಸಲಾಗಿದೆ. ದೇಶದಾದ್ಯಂತ ಹಂತ ಹಂತವಾಗಿ ಈ ಸೇವೆಗಳನ್ನು ವಿಸ್ತರಿಸಲಾಗುತ್ತಿದ್ದು, ಪ್ರಯಾಣಿಕರ ಬೇಡಿಕೆ ಹಾಗೂ ಸಂಪರ್ಕ ಅಗತ್ಯಗಳ ಆಧಾರದ ಮೇಲೆ ಮಾರ್ಗಗಳನ್ನು ಆಯ್ಕೆ ಮಾಡಲಾಗಿದೆ.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಟ್ವೀಟ್ ಮೂಲಕ, “ಹೊಸ ಮೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ಸೇವೆಗಳು ಇಂದು ಪ್ರಾರಂಭವಾಗುತ್ತಿವೆ. ಈಗ ಒಟ್ಟು 30 ರೈಲುಗಳ ಸೇವೆ ಲಭ್ಯವಿದೆ” ಎಂದು ತಿಳಿಸಿದ್ದಾರೆ. ಅಮೃತ್ ಭಾರತ್ ರೈಲುಗಳಿಗೆ ವಿಶೇಷ ವಿನ್ಯಾಸದ ಬೋಗಿಗಳು, ಉತ್ತಮ ಆಸನ ವ್ಯವಸ್ಥೆ, ಪ್ರಯಾಣಿಕರ ಸೌಲಭ್ಯಕ್ಕೆ ತಕ್ಕಂತೆ ತಂತ್ರಜ್ಞಾನ ಆಧಾರಿತ ಸೌಕರ್ಯಗಳೂ ಲಭ್ಯವಿವೆ.

NO COMMENTS

LEAVE A REPLY

Please enter your comment!
Please enter your name here

Exit mobile version