ನರೇಂದ್ರ ಮೋದಿ 75ನೇ ವಯಸ್ಸಿನ ಬಳಿಕ ನಿವೃತ್ತಿಯಾಗುತ್ತಾರೆಯೇ?, ಮುಂದಿನ ಪ್ರಧಾನಿ ಯಾರು? ಈ ಕುರಿತು ಚರ್ಚೆಗಳು ನಡೆದಿವೆ. ಆರ್‍ಎಸ್‌ಎಸ್ 75ರ ಬಳಿಕ ನಿವೃತ್ತಿಯಾಗಬೇಕು ಎಂದು ಸೂಚನೆ ನೀಡಿದೆ ಎಂಬ ಸುದ್ದಿಗಳು ಹಬ್ಬಿವೆ.
ಸೆಪ್ಟೆಂಬರ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ 75ನೇ ವಸಂತಕ್ಕೆ ಕಾಲಿಡಲಿದ್ದಾರೆ. ಹಾಗಾದರೆ ಅವರು ರಾಜಕೀಯ ನಿವೃತ್ತಿ ಪಡೆಯಲಿದ್ದಾರೆಯೇ?. ಕಾಂಗ್ರೆಸ್ ಪಕ್ಷದ ವಿವಿಧ ನಾಯಕರು ಈಗಾಗಲೇ ನರೇಂದ್ರ ಮೋದಿ ನಿವೃತ್ತಿಯ ಮಾತುಗಳನ್ನು ಆಡುತ್ತಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಮೋದಿ ನಿವೃತ್ತಿಯ ಚರ್ಚೆಗಳಿಗೆ ತೆರೆ ಎಳೆದಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಮೋಹನ್ ಭಾಗವತ್ ಪ್ರಧಾನಿ ನರೇಂದ್ರ ಮೋದಿಗಿಂತ 6 ದಿನ ಮೊದಲು 75ನೇ ವಸಂತಕ್ಕೆ ಕಾಲಿಡಲಿದ್ದಾರೆ.
ಮೋಹನ್ ಭಾಗವತ್ ಸ್ಪಷ್ಟನೆ: ಆರ್‍ಎಸ್‌ಎಸ್‌ನ 100ನೇ ವರ್ಷದ ಹಿನ್ನಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮೋಹನ್ ಭಾಗವತ್, “75 ವರ್ಷವಾದಾಗ ನಾನು ನಿವೃತ್ತಿಯಾಗುತ್ತೇನೆ ಅಥವ ಬೇರೆಯವರು ನಿವೃತ್ತರಾಗಬೇಕು ಎಂದು ನಾನು ಎಂದಿಗೂ ಹೇಳಿಲ್ಲ” ಎಂದು ಸ್ಪಷ್ಟಪಡಿಸಿದರು.
“ನಾವೆಲ್ಲರೂ ಸಂಘದ ಸ್ವಯಂ ಸೇವಕರು. ನಮಗೆ ಇಷ್ಟವಿರಲಿ, ಇಲ್ಲದಿರಲಿ ವಹಿಸಿದ ಜವಾಬ್ದಾರಿಯನ್ನು ನಿಭಾಯಿಸುತ್ತೇವೆ. ನಾನು 80 ವರ್ಷವಾದರೂ ಸಹ ಸಂಘವನ್ನು ಮುನ್ನಡೆಸುತ್ತೇನೆ” ಎಂದು ಹೇಳಿದರು.
“ಆರ್‌ಎಸ್ಎಸ್ 100 ವರ್ಷದ ಸಂಭ್ರಮಾಚರಣೆಯಲ್ಲಿದೆ. ನಮಗೆ ಏನು ಹೇಳಿದೆಯೋ ಅದನ್ನು ಮಾಡುತ್ತೇವೆ” ಎಂದು ಮೋಹನ್ ಭಾಗವತ್ ತಿಳಿಸಿದರು.
ಬಿಜೆಪಿ ಹೇಳುವುದೇನು?; ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ 75ನೇ ಹುಟ್ಟುಹಬ್ಬ. ಬಿಜೆಪಿ ಪದೇ ಪದೇ 75 ವರ್ಷದ ಬಳಿಕ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು ಎಂದು ಹೇಳಿಲ್ಲ ಎಂದು ಹೇಳುತ್ತಲೇ ಇದೆ.
“ಪಕ್ಷವು ಫೆಡರಲ್ ಸರ್ಕಾರದತ್ತ ಬೊಟ್ಟು ಮಾಡಿದೆ. ಈಗಾಗಲೇ ಒಬ್ಬ ಸದಸ್ಯರು 80 ವರ್ಷದ ಬಿಹಾರದ ನಾಯಕರಿದ್ದಾರೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ಜಿತನ್ ರಾಮ್ ಮಾಂಝಿ ಆ ಮಿತಿಯನ್ನು ದಾಟಿದ್ದಾರೆ. ಪ್ರಧಾನಿ ಸೇರಿದಂತೆ ಇತರರು ಆ ಮಿತಿಯ ಒಂದು ಅಥವಾ ಎರಡು ವರ್ಷಗಳ ಒಳಗೆ ಇದ್ದಾರೆ” ಎಂದು ಪಕ್ಷ ಹೇಳಿದೆ.
2019ರ ಲೋಕಸಭೆ ಚುನಾವಣೆ ಸಮಯದಿಂದ 75 ವರ್ಷ ಮೀರಿದವರಿಗೆ ಅಮಿತ್ ಶಾ ಟಿಕೆಟ್ ನಿರಾಕರಿಸುತ್ತಿದ್ದಾರೆ ಎಂಬ ಸುದ್ದಿಗಳಿವೆ. ಇದನ್ನು ಪ್ರತಿಪಕ್ಷಗಳು ಮೋದಿ ವಿಚಾರದಲ್ಲಿಯೂ ಹೇಳುತ್ತಿದ್ದು, ಸೆಪ್ಟೆಂಬರ್‌ನಲ್ಲಿ ಅವರು ರಾಜೀನಾಮೆ ನೀಡಲಿದ್ದಾರೆ ಎಂದು ಹೇಳುತ್ತಿವೆ.
ಪಕ್ಷದ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರಿಗೆ ವಯಸ್ಸಿನ ಕಾರಣಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿರಲಿಲ್ಲ. ಇದೇ ನಿಯಮ ಮೋದಿಗೂ ಅನ್ವಯ ಎಂಬುದು ಪ್ರತಿಪಕ್ಷಗಳ ವಾದವಾಗಿದೆ.
2024ರ ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿಯೇ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, “ಮುಂದಿನ ವರ್ಷ ನರೇಂದ್ರ ಮೋದಿ ನಿವೃತ್ತರಾಗಲಿದ್ದಾರೆ. ಅವರು ಅಮಿತ್ ಶಾರನ್ನು ಪ್ರಧಾನಿ ಮಾಡಲು ಮತ ಕೇಳುತ್ತಿದ್ದಾರೆ” ಎಂದು ಹೇಳಿಕೆ ನೀಡಿದ್ದರು.
ದೇಶದಲ್ಲಿ ಪ್ರಧಾನಮಂತ್ರಿ ಹುದ್ದೆ ಖಾಲಿ ಇಲ್ಲ ಎಂಬುದನ್ನು ವಿರೋಧ ಪಕ್ಷಗಳು ಗಮನಿಸಬೇಕು. ಈಗಾಗ್ಲೇ ಹುಚ್ಚೆ ಹುಯ್ದುಕೊಂಡಿರುವ ವಿರೋಧಿ ಪಕ್ಷಗಳಿಗೆ ಮೋದೀಜೀ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ. ಅವರು ಆರೋಗ್ಯದಿಂದಿದ್ದು 2029ರ ಲೋಕಸಭೆಯ ಚುನಾವಣೆಯ ನೇತೃತ್ವವನ್ನು ವಹಿಸುತ್ತಾರೆನ್ನುವುದನ್ನು ವಿರೋಧ ಪಕ್ಷದವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.