Home ಸುದ್ದಿ ದೇಶ ಸಮುದ್ರದಿಂದ ಸಮೃದ್ಧಿ: ರೂ. 34,200 ಕೋಟಿ ಅಭಿವೃದ್ಧಿ ಯೋಜನೆ ಉದ್ಘಾಟನೆ

ಸಮುದ್ರದಿಂದ ಸಮೃದ್ಧಿ: ರೂ. 34,200 ಕೋಟಿ ಅಭಿವೃದ್ಧಿ ಯೋಜನೆ ಉದ್ಘಾಟನೆ

0

ಭಾವನಗರ (ಗುಜರಾತ್): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 20ರಂದು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಇಂದು ಭಾವನಗರದಲ್ಲಿ ನಡೆಯುವ “ಸಮುದ್ರದಿಂದ ಸಮೃದ್ಧಿ” ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ₹34,200 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜನಸಮುದಾಯವನ್ನುದ್ದೇಶಿಸಿ ಭಾಷಣ ಮಾಡುವ ನಿರೀಕ್ಷೆಯಿದೆ.

ಕಡಲ ವಲಯ ಅಭಿವೃದ್ಧಿಗೆ ಉತ್ತೇಜನ: ಕಡಲ ವಲಯದ ಅಭಿವೃದ್ಧಿಗೆ ಪ್ರಧಾನ ಮಂತ್ರಿಗಳು ವಿಶೇಷ ಒತ್ತು ನೀಡಿದ್ದಾರೆ. ಸುಮಾರು ₹7,870 ಕೋಟಿ ಮೌಲ್ಯದ ಅನೇಕ ಯೋಜನೆಗಳನ್ನು ಅವರು ಉದ್ಘಾಟಿಸಲಿದ್ದಾರೆ. ಅದರಲ್ಲೂ ಮುಖ್ಯವಾಗಿ

ಮುಂಬೈ ಅಂತರರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಉದ್ಘಾಟನೆ. ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನ ಹೊಸ ಕಂಟೇನರ್ ಟರ್ಮಿನಲ್. ಪ್ಯಾರದೀಪ್ ಬಂದರಿನ ಹೊಸ ಕಂಟೇನರ್ ಬರ್ತ್ ಮತ್ತು ಸರಕು ನಿರ್ವಹಣಾ ಸೌಲಭ್ಯಗಳು. ಟ್ಯೂನ ಟೆಕ್ರಾ ಮಲ್ಟಿ-ಕಾರ್ಗೋ ಟರ್ಮಿನಲ್. ಚೆನ್ನೈ ಬಂದರಿನ ಕರಾವಳಿ ರಕ್ಷಣಾ ಕಾರ್ಯಗಳು. ಕಾರ್ ನಿಕೋಬಾರ್ ದ್ವೀಪದ ಸಮುದ್ರ ಗೋಡೆಯ ನಿರ್ಮಾಣ. ಕಾಂಡ್ಲಾದ ದೀನದಯಾಳ್ ಬಂದರಿನಲ್ಲಿ ಬಹುಪಯೋಗಿ ಸರಕು ನಿಲ್ದಾಣ ಮತ್ತು ಹಸಿರು ಜೈವಿಕ-ಮೆಥನಾಲ್ ಸ್ಥಾವರ. ಭಾವನಗರದಲ್ಲಿ ಪ್ರಧಾನಿ ಮೋದಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಟ್ಟುಗೂಡಿ ₹26,354 ಕೋಟಿ ಮೌಲ್ಯದ ಹಲವಾರು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ನಂತರ

ಧೋಲೇರಾ ವೈಮಾನಿಕ ಸಮೀಕ್ಷೆ : ಸಮಗ್ರ ಕೈಗಾರಿಕೀಕರಣ ಮತ್ತು ಹಸಿರು ಆರ್ಥಿಕತೆಯನ್ನು ಬೆಂಬಲಿಸುವ ಧೋಲೇರಾ ವಿಶೇಷ ಹೂಡಿಕೆ ಪ್ರದೇಶದ (DSIR) ವೈಮಾನಿಕ ಸಮೀಕ್ಷೆಯನ್ನು ಪ್ರಧಾನ ಮಂತ್ರಿಗಳು ಕೈಗೊಳ್ಳಲಿದ್ದಾರೆ. ಸುಸ್ಥಿರ ಕೈಗಾರಿಕೀಕರಣ, ಸ್ಮಾರ್ಟ್ ಮೂಲಸೌಕರ್ಯ ಹಾಗೂ ಜಾಗತಿಕ ಹೂಡಿಕೆ ಕೇಂದ್ರವನ್ನಾಗಿ DSIR ಅನ್ನು ರೂಪಿಸಲಾಗುತ್ತಿದೆ.

ರಾಷ್ಟ್ರೀಯ ಕಡಲ ಪರಂಪರೆ ಸಂಕೀರ್ಣ ಭೇಟಿ: ಪ್ರಧಾನ ಮಂತ್ರಿಗಳು ಲೋಥಾಲ್‌ನಲ್ಲಿರುವ ರಾಷ್ಟ್ರೀಯ ಕಡಲ ಪರಂಪರೆ ಸಂಕೀರ್ಣ (NHMC)ಕ್ಕೆ ಭೇಟಿ ನೀಡಲಿದ್ದಾರೆ. ಸುಮಾರು ₹4,500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ಸಂಕೀರ್ಣವು ಭಾರತದ ಪ್ರಾಚೀನ ಕಡಲ ಸಂಸ್ಕೃತಿಯನ್ನು ಕಾಪಾಡಿ ಪ್ರದರ್ಶಿಸುವುದರ ಜೊತೆಗೆ ಸಂಶೋಧನೆ, ಪ್ರವಾಸೋದ್ಯಮ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯ ಕೇಂದ್ರವಾಗಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version