ಅಂಧ ಓದುಗರಿಗೆ ಸಿಹಿಸುದ್ದಿ: ಪಾಕ್ಷಿಕದಿಂದ ವಾರಪತ್ರಿಕೆಯಾದ ‘ದೃಷ್ಟಿ’

ಮುಂಬಯಿ: ಅಂಧತ್ವದ ಸಮಸ್ಯೆ ಇರುವವರಿಗೆ ದೇಶ-ವಿದೇಶಗಳ ವಿದ್ಯಮಾನಗಳು ಹಾಗೂ ಸುದ್ದಿಗಳು ತಕ್ಷಣಕ್ಕೆ ತಲುಪಬೇಕು ಎನ್ನುವ ಉದಾತ್ತ ಉದ್ದೇಶದೊಂದಿಗೆ, ರಿಲಯನ್ಸ್ ಫೌಂಡೇಶನ್ ತನ್ನ ಪ್ರಸಿದ್ಧ ‘ದೃಷ್ಟಿ’ ಬ್ರೈಲ್ ಪತ್ರಿಕೆಯನ್ನು ಇನ್ನು ಮುಂದೆ ವಾರಪತ್ರಿಕೆಯಾಗಿ ಪ್ರಕಟಿಸುವುದಾಗಿ ತಿಳಿಸಿದೆ. ಇದುವರೆಗೆ ಇದು ಹದಿನೈದು ದಿನಕ್ಕೊಮ್ಮೆ ಪ್ರಕಟವಾಗುತ್ತಿದ್ದ ಪಾಕ್ಷಿಕ ಪತ್ರಿಕೆಯಾಗಿತ್ತು. ದೇಶದ ಏಕೈಕ ನೋಂದಾಯಿತ ಅಂತಾರಾಷ್ಟ್ರೀಯ ಬ್ರೈಲ್ ಪತ್ರಿಕೆ “ದೃಷ್ಟಿʼ ಆಗಿದ್ದು ಇನ್ಮುಂದೆ ಪ್ರತಿ ವಾರವೂ ಓದುಗರ ಕೈಸೇರಲಿದೆ. ಇದರಿಂದಾಗಿ ಹಿಂದಿ ಹಾಗೂ ಮರಾಠಿ ಭಾಷೆಯ ದೃಷ್ಟಿಹೀನ ಓದುಗರಿಗೆ ತಾಜಾ ಸುದ್ದಿಗಳು, ಪ್ರಚಲಿತ … Continue reading ಅಂಧ ಓದುಗರಿಗೆ ಸಿಹಿಸುದ್ದಿ: ಪಾಕ್ಷಿಕದಿಂದ ವಾರಪತ್ರಿಕೆಯಾದ ‘ದೃಷ್ಟಿ’