Home ಸುದ್ದಿ ದೇಶ ಬಿಹಾರ ಚುನಾವಣೆ: ಎಕ್ಸಿಟ್ ಪೋಲ್‌ನಲ್ಲಿ ಎನ್‌ಡಿಎಗೆ ಬಹುಮತ

ಬಿಹಾರ ಚುನಾವಣೆ: ಎಕ್ಸಿಟ್ ಪೋಲ್‌ನಲ್ಲಿ ಎನ್‌ಡಿಎಗೆ ಬಹುಮತ

0

ಪಟನಾ: ಬಿಹಾರ ವಿಧಾನಸಭೆಯ ಒಟ್ಟು 243 ಸ್ಥಾನಗಳ ಪೈಕಿ ಉಳಿದ 122 ಕ್ಷೇತ್ರಗಳಿಗೆ ಮಂಗಳವಾರ 2ನೇ ಹಂತದ ಮತದಾನ ಯಶಸ್ವಿಯಾಗಿ ಮುಗಿದಿದೆ. ಇತಿಹಾಸದಲ್ಲೇ ದಾಖಲೆ ಪ್ರಮಾಣದ 67.14ರಷ್ಟು ಮತದಾನ ವಾಗಿದೆ. ಎರಡೂ ಹಂತಗಳ ಮತದಾನ ಮುಗಿದ ಕೂಡಲೇ ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದಿದ್ದು, ಬಹುತೇಕ ಎಕ್ಸಿಟ್ ಪೋಲ್‌ಗಳು ಮತ್ತೆ ಎನ್.ಡಿ.ಎ. ಬಹುಮತದಿಂದ ಅಧಿಕಾರಕ್ಕೆ ಏರುವ ನಿರೀಕ್ಷೆ ವ್ಯಕ್ತಪಡಿಸಿವೆ.

ಆರ್.ಜೆ.ಡಿ. ನೇತೃತ್ವದ ವಿಪಕ್ಷಗಳ ಒಕ್ಕೂಟ `ಮಹಾಗಠಬಂಧನ್’ ಅಧಿಕಾರ ಪಡೆಯು ವಲ್ಲಿ ವಿಫಲವಾಗಲಿದೆ ಎಂದು ಭವಿಷ್ಯ ನುಡಿಯ ಲಾಗಿದ್ದು, ಜನಸುರಾಜ್ ಪಕ್ಷ ಕಟ್ಟಿ ಹೊಸದಾಗಿ ಚುನಾವಣಾ ಕಣ ಪ್ರವೇಶಿಸಿದ್ದ ರಾಜಕೀಯ ವಿಶ್ಲೇಷಕ ಪ್ರಶಾಂತ್ ಕಿಶೋರ್ ಅವರ ಪಕ್ಷಕ್ಕೆ ಎಕ್ಸಿಟ್ ಪೋಲ್‌ನಲ್ಲಿ ಕನಿಷ್ಟ ಒಂದು ಸ್ಥಾನವೂ ಲಭ್ಯವಾಗಿಲ್ಲ. ಮತಗಟ್ಟೆ ಸಮೀಕ್ಷೆ ಮಾಡಿರುವ ಮಾಟ್ರಿಜ್, ಜೆವಿಸಿ, ಚಾಣ್ಯಕ್ಯ ಸ್ಟ್ಯಾಟಜೀಸ್, ಟಿಐಎಫ್ ರೀಸರ್ಚ್, ಪಿ. ಮಾರ್ಕ್, ಪೀಪಲ್ಸ್ ಇನ್‌ಸೈಟ್, ದೈನಿಕ ಭಾಸ್ಕರ್, ಡಿ.ವಿ. ರೀಸರ್ಚ್ ಮತ್ತು ಪೀಪಲ್ಸ್ ಪಲ್ಸ್- ಈ ಎಲ್ಲ 9 ಸಂಸ್ಥೆಗಳೂ ಎನ್.ಡಿ.ಎ.ಗೆ ಬಹುಮತ ನೀಡಿ ಭವಿಷ್ಯ ನುಡಿದಿವೆ.

ನಿತೀಶ್‌ಗೆ ಪ್ಲಸ್ ಪಾಯಿಂಟ್: ಕಳೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರ ಜೆಡಿಯು ಅದಕ್ಕೂ ಹಿಂದಿನ ಚುನಾವಣೆಗೆ ಹೋಲಿಸಿದಾಗ 25 ಸ್ಥಾನ ಕಳೆದುಕೊಂಡು 43 ಸ್ಥಾನ ಪಡೆದಿತ್ತು. ಏಕೆಂದರೆ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷದ ಬಂಡಾಯ ಇದಕ್ಕೆ ಕಾರಣವಾಗಿತ್ತು. ಆದರೆ ಈ ಬಾರಿ ಪಾಸ್ವಾನ್ ಅವರು ತಮ್ಮ ಪಕ್ಷವನ್ನು ಎನ್‌ಡಿಎ ಜೊತೆಗೆ ಜೋಡಿಸಿರುವುದು ನಿತೀಶ್‌ಗೆ ಪ್ಲಸ್ ಪಾಯಿಂಟ್ ಆಗಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version