Home ತಾಜಾ ಸುದ್ದಿ IFS ಅಧಿಕಾರಿ ಶಿವಾನಂದ ನಾಯಕವಾಡಿ ಅಮಾನತು

IFS ಅಧಿಕಾರಿ ಶಿವಾನಂದ ನಾಯಕವಾಡಿ ಅಮಾನತು

0

ಬೆಳಗಾವಿ:ರಾಯಭಾಗ ಶಾಸಕರೊಂದಿಗೆ ಮೊಬೈಲ್ ಸಂಭಾಷಣೆಯಲ್ಲಿ ಅನುಚಿತವಾಗಿ ಮಾತನಾಡಿದ ಆರೋಪದ ಮೇಲೆ ಸರಕಾರ IFS ಅಧಿಕಾರಿ ಶಿವಾನಂದ ನಾಯಕವಾಡಿ ಅವರನ್ನು ಅಮಾನತುಗೊಳಿಸಿದೆ.
ಕಳೆದ ಕೆಲ ತಿಂಗಳ ಹಿಂದೆ ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಅವರು ಸರಕಾರಿ ಕೆಲಸದ‌ ನಿಮಿತ್ತ ಗೋಕಾಕ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ(DCF) ಶಿವಾನಂದ ನಾಯಿಕವಾಡಿ ಅವರಿಗೆ ದೂರವಾಣಿ ಕರೆ ಮಾಡಿದ್ದಾಗ, ಶಾಸಕ ಮತ್ತು ಅಧಿಕಾರಿ ಮಧ್ಯೆ ವಾಗ್ವಾದ ನಡೆದು, ಆ ಆಡಿಯೋ ವೈರಲ್ ಆಗಿತ್ತು.
ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿತ್ತು. ಕೂಡಲೇ ಗೋಕಾಕ DCF ಶಿವಾನಂದ ಅವರಿಗೆ ನೊಟೀಸ್ ನೀಡಿತ್ತು. ವಿಚಾರಣೆ ಬಳಿಕ ಸರಕಾರ ಡಿಸಿಎಫ್ ಶಿವಾನಂದ ನಾಯಿಕವಾಡಿ ಅವರನ್ನು ಅಮಾನತುಗೊಳಿಸಿರುವುದು ಹೊರ ಬಿದ್ದಿದೆ. ಬೆಳಗಾವಿ ಡಿಸಿಎಫ್ ಎಸ್. ಕೆ. ಕಲ್ಲೋಳಿಕರ ಅವರಿಗೆ ಗೋಕಾಕ ವಿಭಾಗದ ಹೆಚ್ಚುವರಿ ಜವಾಬ್ದಾರಿ ನೀಡಿ ಸರಕಾರ ಆದೇಶಿಸಿದೆ.

Exit mobile version