ಬೆಂಗಳೂರು: ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆಗಳು ಸೀಮಿತ ಏರಿಕೆ ಕಾಣುವ ಸಾಧ್ಯತೆಯಿದೆ ಎಂದು ಆನಂದ್ ರಥಿ ಶೇರ್ ಅಂಡ್ ಸ್ಟಾಕ್ ಬ್ರೋಕರ್ಸ್‌ನ ಉಪಾಧ್ಯಕ್ಷ ಮನೀಶ್ ಶರ್ಮಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಾಪಾರ ನೀತಿಗಳ ಕುರಿತು ಸ್ಪಷ್ಟತೆ ಹೊರಬರುತ್ತಿದ್ದಂತೆ ಚಿನ್ನದ ಬೆಲೆ ಏರಿಕೆ ಕಾಣಲಿದೆ ಎಂದು ಹೇಳಿದ್ದಾರೆ. ಈ ಮೂಲಕ ಚಿನ್ನ ಮತ್ತು ಬೆಳ್ಳಿ ಹೂಡಿಕೆದಾರರಿಗೆ ಸದ್ಯ ಹೂಡಿಕೆ ಮಾಡಲು ಸಕಾಲ ಎಂದು ತಿಳಿಸಿದ್ದಾರೆ.
ಕಳೆದ ವಾರದ ಆರಂಭದ ಏರಿಕೆ ಕಂಡು ನಂತರದ ದಿನದಲ್ಲಿ ಕುಸಿತ ಕಂಡಿದ್ದು, ಬಾರಿ ನಷ್ಟ ಉಂಟಾಯಿತು. ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಯೂನಿಯನ್ ನಡುವಿನ ವ್ಯಾಪಾರ ಒಪ್ಪಂದವು ಸುರಕ್ಷಿತ ಸ್ವತ್ತುಗಳ ಬೇಡಿಕೆ ಕುಗ್ಗಿಸಿದ್ದವು. ಅಲ್ಲದೇ ಯುರೋಪಿಯನ್ ಸರಕುಗಳ ಮೇಲೆ ಪ್ರತಿಶತ 15 ರಷ್ಟು ಸುಂಕದ ಒಪ್ಪಂದಕ್ಕೆ ಬಂದವು, ಅಲ್ಲದೇ ಯುಎಸ್ ಮತ್ತು ಚೀನಾ ಇನ್ನೂ ಮೂರು ತಿಂಗಳು ತಮ್ಮ ಸುಂಕದ ಒಪ್ಪಂದ ವಿಸ್ತರಿಸಿದವು.
ಏತನ್ಮಧ್ಯೆ, ಇಸಿಬಿ ದರಗಳು ಸ್ಥಿರವಾಗಿ ಕಾಯ್ದುಕೊಂಡಿತು. ಎರಡನೇ ತ್ರೈಮಾಸಿಕದಲ್ಲಿ ಯುಎಸ್ ಕಾರ್ಪೊರೇಟ್‌ಗಳು ಲಾಭದತ್ತ ಮುಂದುವರಿದವು. ಇದರ ಮಧ್ಯೆ ಸಾಂಪ್ರದಾಯಿಕ ಸುರಕ್ಷಿತ ಸ್ವತ್ತಾಗಿರುವ ಚಿನ್ನ ಅಪಾಯವನ್ನು ಸೂಚಿಸಿತು. ಕಳೆದ ವಾರದ ಆರಂಭಿಕ ಲಾಭದಲ್ಲಿ ಬಂಗಾರ ಮತ್ತೆ ಏಪ್ರಿಲ್ ಅಂತ್ಯದ ಶ್ರೇಣಿಗೆ ಮರಳಿತು ಎಂದಿದ್ದಾರೆ.
ಇನ್ನೂ ಕರೆನ್ಸಿ ಮಾರುಕಟ್ಟೆಯಲ್ಲಿ 3 ವರ್ಷಗಳ ಕನಿಷ್ಠ ಮಟ್ಟದ ಏರಿಕೆಯನ್ನು ತಿಂಗಳ ಆರಂಭದಲ್ಲಿ ಡಾಲರ್ ಮೌಲ್ಯದಲ್ಲಿ ಕಂಡು ಬಂದಿದೆ. ವ್ಯಾಪಾರ ಒಪ್ಪಂದದ ಆಶಾವಾದದ ಕಾರಣ ಏರಿಕೆಗೆ ಕಾರಣವಾಗಿದೆ. ಸುರಕ್ಷಿತ ತಾಣ ಯೆನ್ ಸತತವಾಗಿ ನಾಲ್ಕನೇ ದಿನದಲ್ಲಿಯೂ ಕಡಿಮೆ ಮಟ್ಟದ ಖರೀದಿದಾರರನ್ನು ಹೊಂದಿತ್ತು. ಆದರೆ, ಒಂದೂವರೆ ವಾರಗಳ ಗರಿಷ್ಟ ಮಟ್ಟಕ್ಕೆ ಇಂದು ಏರಿಕೆ ಕಂಡಿದೆ ಎಂದು ಅವರು ಹೇಳಿದ್ದಾರೆ.
ಫೆಡರಲ್ ರಿಸರ್ವ್ ನೀತಿ ಸಭೆ ಗುರುವಾರ ನಡೆಯಲಿದೆ ಮತ್ತಯ ಬ್ಯಾಂಕ್ ಆಫ್ ಜಪಾನ್ ಮತ್ತು ಯುಎಸ್‌ನಿಂದ ಆರ್ಥಿಕ ದತ್ತಾಂಶ ಬಿಡುಗಡೆಯಾಗಲಿವೆ. ಇವೆಲ್ಲವನ್ನೂ ಹೂಡಿಕೆದಾರರು ಗಮನಿಸಿ ಸಿದ್ಧತೆ ನಡೆಸಿದ್ದಾರೆ. ಆದರೆ ಫೆಡ್ ದರ ಯಥಾಸ್ಥಿತಿಯಲ್ಲಿಡುವ ನಿರೀಕ್ಷೆ ಇದೆ. ಅಲ್ಲದೇ ಸೆಪ್ಟೆಂಬರ್‌ನಲ್ಲಿ ಸಂಭಾವ್ಯ ದರ ಕಡಿತದ ಸಂಕೇತಗಳನ್ನು, ಬ್ಯಾಂಕ್ ಆಫ್ ಜಪಾನ್ ದರ ಏರಿಕೆಯ ಸಂಕೇತಗಳನ್ನು ಸೂಕ್ಷ್ಮ ಗಮನಿಸಬೇಕು ಎಂದಿದ್ದಾರೆ.
ಸದ್ಯ ಡಾಲರ್ ಸೂಚ್ಯಂಕ ಪ್ರಸ್ತುತ ಮಟ್ಟದಿಂದ ಇನ್ನಷ್ಟು ಬಲಗೊಳ್ಳುವ ಸಾಧ್ಯವಿದೆ. ಬ್ಯಾಂಕ್ ಆಫ್ ಜಪಾನ್ ಬಡ್ಡಿದರ ಏರಿಕೆಯ ಸಾಧ್ಯತೆ ವಿರಳವಾಗಿರುವುದರಿಂದ ಡಾಲರ್ ವಿರುದ್ಧ ಯೆನ್ ದುರ್ಬಲವಾಗುವ ಸಾಧ್ಯವಿದೆ. ಪ್ರಸ್ತುತ ಅಮೂಲ್ಯ ಲೋಹಗಳಲ್ಲಿ ಸೀಮಿತ ಏರಿಕೆಗೆ ಕಾಣಬಹುದು ಎಂದಿದ್ದಾರೆ.