Home News 7 ವರ್ಷದ ಬಾಲಕಿಗೆ 55 ವರ್ಷದ ವ್ಯಕ್ತಿಯಿಂದ ಲೈಂಗಿಕ ಕಿರುಕುಳ

7 ವರ್ಷದ ಬಾಲಕಿಗೆ 55 ವರ್ಷದ ವ್ಯಕ್ತಿಯಿಂದ ಲೈಂಗಿಕ ಕಿರುಕುಳ

ಶಿಗ್ಗಾವಿ(ಹಾವೇರಿ): 7 ವರ್ಷದ ಬಾಲಕಿಗೆ 55 ವರ್ಷದ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ಶಿಗ್ಗಾವಿ ತಾಲೂಕಿನ ಹುಲಗೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶಿಗ್ಗಾವಿ ತಾಲೂಕಿನ ಬೆಳವಲಕೊಪ್ಪ ಗ್ರಾಮದಲ್ಲಿ ಬಾಲಕಿ ಮನೆಯ ಮುಂದೆ ಆಟವಾಡುತ್ತಿದ್ದಾಗ ಆರೋಪಿ ಮರ್ದಾನ್ ಪಟೇಲ್ ಎಂಬಾತ ಮಾವಿನ ಹಣ್ಣು ಕೊಡುತ್ತೇನೆ ಬಾ ಎಂದು ಆಸೆ ತೋರಿಸಿ ಕರೆದಿದ್ದಾನೆ. ಬಳಿಕ ಕಟ್ಟಡ ಕಾಮಗಾರಿ ನಡೆದಿರುವ ದೇವಸ್ಥಾನವೊಂದರ ಹಿಂಭಾಗಕ್ಕೆ ಕರೆದುಕೊಂಡು ಹೋಗಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಘಟನೆ ಕುರಿತು ಹುಲಗೂರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

Exit mobile version