Home ತಾಜಾ ಸುದ್ದಿ 5 ಹೊಸ ಜಿಲ್ಲೆಗಳ ಘೋಷಣೆ ಮಾಡಿದ ಕೇಂದ್ರ ಗೃಹಸಚಿವಾಲಯ

5 ಹೊಸ ಜಿಲ್ಲೆಗಳ ಘೋಷಣೆ ಮಾಡಿದ ಕೇಂದ್ರ ಗೃಹಸಚಿವಾಲಯ

0

ಕೇಂದ್ರಾಡಳಿತ ಪ್ರದೇಶ ಲಡಾಖ್​​ನಲ್ಲಿ ಐದು ಹೊಸ ಜಿಲ್ಲೆಗಳನ್ನು ರಚಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪೋಸ್ಟ್‌ ಮಾಡಿದ್ದಾರೆ. ಜನ್ ಸ್ಕರ್, ಡ್ರಾಸ್, ಶಾಮ್, ನುಬ್ರಾ ಮತ್ತು ಚಾಂಗ್ಥಾಂಗ್ ಇವು ಲಡಾಖ್​ನಲ್ಲಿ ಅಸ್ತಿತ್ವಕ್ಕೆ ಬರಲಿರುವ ಹೊಸ ಜಿಲ್ಲೆಗಳಾಗಿವೆ. ಆಡಳಿತವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ಉದ್ದೇಶದಿಂದ ಹೊಸ ಜಿಲ್ಲೆಗಳನ್ನು ರಚಿಸಲಾಗಿದೆ. ಐದು ವರ್ಷಗಳ ಹಿಂದೆ ಇದೇ ದಿನ, 370ನೇ ವಿಧಿಯಡಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಲಾಗಿತ್ತು. ಸದ್ಯ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ, ಲಡಾಖ್ ಕೇಂದ್ರ ಗೃಹ ಸಚಿವಾಲಯದ ನೇರ ಆಡಳಿತಾತ್ಮಕ ನಿಯಂತ್ರಣದಲ್ಲಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಐದು ಹೊಸ ಜಿಲ್ಲೆಗಳ ರಚನೆಯಿಂದ ಲಡಾಖ್‌ನಲ್ಲಿ ಜಿಲ್ಲೆಗಳ ಸಂಖ್ಯೆ 7ಕ್ಕೆ ಏರಲಿದೆ.

Exit mobile version