Home ಅಪರಾಧ 24 ಗಂಟೆಯೊಳಗೆ ಕೊಲೆ ಪ್ರಕರಣ ಭೇದಿಸಿದ ‘ತಾರಾ’

24 ಗಂಟೆಯೊಳಗೆ ಕೊಲೆ ಪ್ರಕರಣ ಭೇದಿಸಿದ ‘ತಾರಾ’

0

ದಾವಣಗೆರೆ: ಕೊಲೆ ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ‘ತಾರಾ’ ಶ್ವಾನ ಪ್ರಕರಣ ಭೇದಿಸಿ ಆರೋಪಿ ಬಂಧನಕ್ಕೆ ಕಾರಣವಾಗಿದೆ.
ತಾಲೂಕಿನ ಹೊನ್ನೂರು ಗ್ರಾಮದ ಜಯ್ಯಪ್ಪ (29) ಬಂಧಿತ ಆರೋಪಿ. ಅಕ್ರಮ ಸಂಬಂಧ ವಿಚಾರವಾಗಿ ಚಿತ್ರದುರ್ಗ ತಾಲೂಕಿನ ಹೆಗಡೆ ಹಾಳ್ ಗ್ರಾಮದ ಶಿವಕುಮಾರ್ (28) ಎಂಬುವನ ಕೊಲೆ ನಡೆದಿತ್ತು.
ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಸಂತೋಷ್, ಜಿ.ಮಂಜುನಾಥ್, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ್ ಮಾರ್ಗದರ್ಶನದಲ್ಲಿ ದಾವಣಗೆರೆ ಗ್ರಾಮಾಂತರ ಠಾಣೆಯ ಸಿಪಿಐ ಇ.ವೈ. ಕಿರಣ್‌ಕುಮಾರ್ ನೇತೃತ್ವದಲ್ಲಿ ಪಿಎಸ್‌ಐ ಹಾರೂನ್ ಅಖ್ತರ್, ಸಿಬ್ಬಂದಿ ತಂಡ ರಚಿಸಲಾಗಿತ್ತು. ದಾವಣಗೆರೆ ಜಿಲ್ಲಾ ಡಾಗ್ ಸ್ಕ್ವಾಡ್‌ನ ‘ತಾರಾ’ ಶ್ವಾನ ಸುಮಾರು 1 ಕಿ.ಮೀ. ದೂರ ಕ್ರಮಿಸಿ ಆರೋಪಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

Exit mobile version