Home ಸುದ್ದಿ ದೇಶ 2 ಸಾವಿರ ರೂ. ನೋಟು ಬದಲಾವಣೆಗೆ ಗಡುವು ವಿಸ್ತರಣೆ

2 ಸಾವಿರ ರೂ. ನೋಟು ಬದಲಾವಣೆಗೆ ಗಡುವು ವಿಸ್ತರಣೆ

0

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬ್ಯಾಂಕ್‌ಗಳಲ್ಲಿ 2000 ರೂಪಾಯಿ ಕರೆನ್ಸಿ ನೋಟುಗಳನ್ನು ಬದಲಾವಣೆ ಮಾಡುವ ಅಥವಾ ಡೆಪಾಸಿಟ್ ಮಾಡಲು ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಿದೆ. ನೋಟನ್ನು ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳುವ ಕೊನೆಯ ದಿನಾಂಕವನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಗಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ. ಈ ಹಿಂದೆ 2,000 ರೂಪಾಯಿ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30 ಕೊನೇ ದಿನ ಎಂದು ಆರ್‌ಬಿಐ ಗಡುವು ನಿಗದಿ ಮಾಡಿತ್ತು.

https://samyuktakarnataka.in/%e0%b2%8f%e0%b2%95%e0%b2%be%e0%b2%82%e0%b2%97%e0%b2%bf%e0%b2%af%e0%b2%be%e0%b2%97%e0%b2%bf-%e0%b2%ae%e0%b3%87%e0%b2%b2%e0%b2%95%e0%b3%8d%e0%b2%95%e0%b3%86-%e0%b2%ac%e0%b2%b0%e0%b3%8b%e0%b2%95%e0%b3%86/

Exit mobile version