Home ತಾಜಾ ಸುದ್ದಿ 100 ದಿನದಲ್ಲಿ ಒತ್ತುವರಿ ತೆರವು ಮಾಡಿ

100 ದಿನದಲ್ಲಿ ಒತ್ತುವರಿ ತೆರವು ಮಾಡಿ

0

ಬೆಂಗಳೂರು: ಒಂದು ಸಣ್ಣ ಮಳೆಗೆ ಬೆಂಗಳೂರು ಜಲಾವೃತವಾಗಿ ಜನ ಜೀವನ ಅಸ್ತವ್ಯಸ್ತವಾಗುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ವಸತಿ ಸಮುಚ್ಚಯ (ಅಪಾರ್ಟ್ಮೆಂಟ್), ಅಂಗಡಿ ಮುಂಗಟ್ಟುಗಳು, ಪ್ರಭಾವಿಗಳ ಕಟ್ಟಡಗಳ ಒತ್ತುವರಿಯನ್ನು ಸರ್ಕಾರ ಯಾವುದೇ ಮುಲಾಜಿಲ್ಲದೆ ತೆರವು ಮಾಡಬೇಕು. ಕಾಟಾಚಾರಕ್ಕೆ ಕಾರ್ಯಾಚರಣೆ ಮಾಡಿ ನಿಲ್ಲಿಸುವುದರಿಂದ ಯಾವುದೇ ಉಪಯೋಗವಿಲ್ಲ. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿರುವ ಕೆಲ ಭ್ರಷ್ಟ ಅಧಿಕಾರಿಗಳಿಂದ, ಲಂಚಕೋರ ಇಂಜಿನಿಯರ್‌ಗಳಿಂದ ಇಂದು ಬೆಂಗಳೂರಿಗರಿಗೆ ಈ ಗತಿ ಬಂದಿದೆ. ರಾಜಕಾಲುವೆಗಳ ಮೇಲೆ ಮನೆ, ಅಪಾರ್ಟ್ಮೆಂಟ್, ಹೋಟೆಲು, ಆಸ್ಪತ್ರೆ ಕಟ್ಟಲು ಅನುಮತಿ ಕೊಟ್ಟ ಅಧಿಕಾರಿಗಳ ಹೆಸರನ್ನು ಪಟ್ಟಿ ಮಾಡಿ ಅವರನ್ನು ಅಮಾನತ್ತಿನಲ್ಲಿಡಿ. ಮಳೆ ಮುಗಿದ ನಂತರ 100 ದಿನದಲ್ಲಿ ಬೆಂಗಳೂರಿನಲ್ಲಿರುವ ಎಲ್ಲ ಒತ್ತುವರಿಯನ್ನು ತೆರವು ಮಾಡಿ. ಮಹಾನ್ ದಾರ್ಶನಿಕರಾದ ಕೆಂಪೇಗೌಡರ ಊರನ್ನು ಹಾಳುಗೆಡವಬೇಡಿ. ಯಾರ ಪ್ರಭಾವಕ್ಕೂ ಸಿಲುಕದೆ, ಮಣಿಯದೆ ಮುಲಾಜಿಲ್ಲದೆ ರಾಜಕಾಲುವೆ ಒತ್ತುವರಿ ತೆರವು ಮಾಡಿ, ಬೆಂಗಳೂರನ್ನು ರಕ್ಷಿಸಿ ಎಂದಿದ್ದಾರೆ.

Exit mobile version