Home ಅಪರಾಧ ೨೪ ಗಂಟೆಯಲ್ಲಿ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು

೨೪ ಗಂಟೆಯಲ್ಲಿ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು

0

ಹುಬ್ಬಳ್ಳಿ: ತಾರಿಹಾಳ ಲೋಟಸ್ ಬಾರ್ ಬಳಿ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ಷಣ್ಮುಖಪ್ಪ ಹಡಪದ ಸಾವಿನ ಪ್ರಕರಣವನ್ನು ಕೇವಲ ೨೪ ಗಂಟೆಯಲ್ಲಿ ಬೇಧಸಿರುವ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏ. ೭ರಿಂದ ಏ. ೮ರ ನಡುವಿನ ಸಮಯದಲ್ಲಿ ತಾರಿಹಾಳ ಲೋಟಸ್ ಬಾರ್ ಹತ್ತಿರವಿರುವ ಚಿಕ್ಕು ತೋಟದಲ್ಲಿ ದುಷ್ಕರ್ಮಿಗಳು ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮದ ತಾರಿಹಾಳದ ವಾಜಪೇಯಿ ನಗರದ ನಿವಾಸಿ ಷಣ್ಮುಖಪ್ಪ ಹಡಪದ(೫೫) ಎಂಬಾತನನ್ನು ಬೀಯರ ಬಾಟಲಿಗಳಿಂದ ಹೊಡೆದು ಕೊಲೆ ಮಾಡಿದ್ದರು. ಬಳಿಕ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೋಲಿಸರು ಪರಿಶೀಲನೆ ನಡೆಸಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಟ್ಟಿಗಟ್ಟಿಯ ಪ್ರವೀಣ ಕುಬಿಹಾಳ(೨೫), ಹನಮಂತ ಮಾಳಗಿಮನಿ(೨೫), ಸಹದೇವ ನೂಲ್ವಿ(೨೪) ಎಂಬಾತರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, ನಾಲ್ಕು ಮೊಬೈಲ್ ಫೋನ್ ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸರಾಯಿ ಕುಡಿಯುವ ವಿಷಯಕ್ಕೆ ಜಗಳ ನಡೆದು ಕೊಲೆ ಮಾಡಲಾಗಿದೆ ಎಂದು ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.

Exit mobile version