Home ತಾಜಾ ಸುದ್ದಿ ಹೊಸ ವಿಮಾನ ನಿಲ್ದಾಣಗಳ ಘೋಷಣೆ

ಹೊಸ ವಿಮಾನ ನಿಲ್ದಾಣಗಳ ಘೋಷಣೆ

0

ನವದೆಹಲಿ: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ ಬಜೆಟ್ ಭಾಷಣದಲ್ಲಿ ಹೊಸ ವಿಮಾನ ನಿಲ್ದಾಣಗಳ ಘೋಷಣೆ ಮಾಡಿದ್ದಾರೆ.
ಉಡಾನ್ ಯೋಜನೆ:
ಮುಂದಿನ 10 ವರ್ಷಗಳಲ್ಲಿ 4 ಕೋಟಿ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಹೊಸ ಏರ್‌ಪೋರ್ಟ್ ನಿರ್ಮಾಣ ಮಾಡಲಾಗುತ್ತಿದೆ. ಬಜೆಟ್‌ನಲ್ಲಿ ಬಿಹಾರದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ ಎಂದು ಘೋಷಿಸಲಾಗಿದೆ.
ಈಗಾಗಲೇ ಕೇಂದ್ರ ಸರ್ಕಾರ ಉಡಾನ್ ಯೋಜನೆಯನ್ನು ಘೋಷಣೆ ಮಾಡಿದೆ. ಈ ಮೂಲಕ ಎರಡು ಮತ್ತು 3ನೇ ಹಂತದ ನಗರಗಳಿಗೆ ಸಹ ವಿಮಾನ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಕೇಂದ್ರ ಸರ್ಕಾರ ಜನ ಸಾಮಾನ್ಯರು ಸಹ ವಿಮಾನದಲ್ಲಿ ಹಾರಾಡಲು ಅನುಕೂಲವಾಗಬೇಕು ಎಂದು ಅಕ್ಟೋಬರ್ 21, 2016ರಂದು ಉಡಾನ್ ಯೋಜನೆಯನ್ನು ಘೋಷಣೆ ಮಾಡಿತ್ತು. ‘ಉಡೇ ದೇಶ್ ಕಾ ಆಮ್ ನಾಗರಿಕ್’ ಎನ್ನುವ ಘೋಷಣೆಯೊಂದಿಗೆ ಈ ಯೋಜನೆ ಆರಂಭಿಸಲಾಯಿತು. ನಾಗರಿಕ ವಿಮಾನಯಾನ ಸಚಿವಾಲಯ ದೇಶಾದ್ಯಂತ ವಿಮಾನಗಳ ಮೂಲಕ ಪ್ರಾದೇಶಿಕ ವಾಯು ಸಂಪರ್ಕವವನ್ನು ಜನಸಾಮಾನ್ಯರ ಕೈಗೆಟುಕುವಂತೆ ಮಾಡಲು ಈ ಯೋಜನೆ ಜಾರಿಗೊಳಿಸಿತು. ಯೋಜನೆ ವಿಶೇಷವಾಗಿ ದೂರದ ಪ್ರದೇಶಗಳಲ್ಲಿ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಸುಧಾರಿಸಲು ಸಹಾಯಕವಾಗಿದೆ.

ಟಿಡಿಎಸ್ ಮಿತಿ ಹೆಚ್ಚಳ:
ಹಿರಿಯ ನಾಗರಿಕರಿಗೆ ಟಿಡಿಎಸ್ ಮಿತಿ ಹೆಚ್ಚಳ ಮಾಡಲಾಗುವುದು, ಹೊಸ ಆದಾಯ ತೆರಿಗೆ ಮಸೂದೆಯು ಮಧ್ಯಮ ವರ್ಗದ ಮೇಲೆ ಕೇಂದ್ರೀಕೃತವಾಗಿರುತ್ತದೆ. ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿಯನ್ನು 50,000 ರೂ. ನಿಂದ 1 ಲಕ್ಷ ರೂ. ಗೆ ಹೆಚ್ಚಳ ಮಾಡಲಾಗುತ್ತಿದೆ ಎಂದು ತಿಳಿಸಿದರು. ಉದಾರೀಕೃತ ರವಾನೆ ಯೋಜನೆಯಡಿಯಲ್ಲಿ ಹಣ ರವಾನೆಯ ಮೇಲೆ ಮೂಲದಲ್ಲಿ ತೆರಿಗೆ ಸಂಗ್ರಹಿಸುವ ಮಿತಿಯನ್ನು ಹಿಂದಿನ 7 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು. ಬಾಡಿಗೆ ಮೇಲಿನ ಟಿಡಿಎಸ್‌ನ ವಾರ್ಷಿಕ ಮಿತಿ 2.4 ಲಕ್ಷ ರೂ.ಗಳಿಂದ 6 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದರು.

Exit mobile version