Home ತಾಜಾ ಸುದ್ದಿ ಹೊಲಕ್ಕೆ ನುಗ್ಗಿ ಪಲ್ಟಿಯಾದ ಸಾರಿಗೆ ಬಸ್

ಹೊಲಕ್ಕೆ ನುಗ್ಗಿ ಪಲ್ಟಿಯಾದ ಸಾರಿಗೆ ಬಸ್

0

ಮುದಗಲ್: ಸಮೀಪದ ಖೈರವಾಡಗಿ ಗ್ರಾಮದ ಹತ್ತಿರ ಸಾರಿಗೆ ಬಸ್ ಪಲ್ಟಿಯಾದ ಘಟನೆ ನಡೆದಿದೆ.
ಲಿಂಗಸೂಗುರುದಿಂದ ನಾಗರಹಾಳ ಗ್ರಾಮಕ್ಕೆ 37 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಸಾರಿಗೆ ಬಸ್ ಬ್ರೇಕ್ ಫೇಲ್ ಆದ ಹಿನ್ನೆಲೆಯಲ್ಲಿ ಖೈರವಾಡಗಿ ಗ್ರಾಮದ ಹತ್ತಿರ ಹೊಲಕ್ಕೆ ನುಗ್ಗಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಘಟನೆಯಲ್ಲಿ ಯಾರಿಗೂ ಯಾವುದೇ ಪ್ರಾಣಾಯಪಾಯ ಆಗಿಲ್ಲ. ಸ್ಥಳಕ್ಕೆ ಮುದುಗಲ್ ಪೊಲೀಸರು ದೌಡಾಯಿಸಿದ್ದಾರೆ.

Exit mobile version