Home ನಮ್ಮ ಜಿಲ್ಲೆ ಕೋಲಾರ ಹೆದ್ದಾರಿಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪಿಗಳ ಬಂಧನ

ಹೆದ್ದಾರಿಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪಿಗಳ ಬಂಧನ

0

ಕೋಲಾರ: ನಗರ ಪೊಲೀಸ್ ಪೊಲೀಸರಿಂದ ರಾಜ್ಯದ ಹಲವಾರು ಕಡೆ ಅಂಗಡಿಗಳ ರೋಲಿಂಗ್ ಷಟರ್ ಹೊಡೆದು ಹಣ ಕಳ್ಳತನ ಮಾಡಿದ್ದ & ಹೆದ್ದಾರಿಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪಿಗಳ ಬಂಧನ.

ಕೋಲಾರ ನಗರದಲ್ಲಿ ಇತ್ತೀಚೆಗೆ ರೋಲಿಂಗ್ ಷಟರ್ ಹೊಡೆದು ಹಣ ಕಳ್ಳತನ ಮಾಡುತ್ತಾ ಸಾರ್ವಜನಿಕರ ಮತ್ತು ಪೊಲೀಸರ ನಿದ್ದೆಗೆಡಿಸಿದ್ದ ಆರೋಪಿಗಳನ್ನು ಬಂಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ನಿಖಿಲ್ ಬಿ. ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶ್ರೀ ರವಿಶಂಕರ್ ಶ್ರೀ ಹೆಚ್.ಸಿ. ಜಗದೀಶ್ ಮತ್ತು ಪೊಲೀಸ್ ಉಪಾಧೀಕ್ಷಕರು ಕೋಲಾರ ಉಪವಿಭಾಗ ಶ್ರೀ ಎಂ. ಹೆಚ್. ನಾಗ್ಲೆ ರವರ ಮಾರ್ಗದರ್ಶನದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ಕೋಲಾರ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಸದಾನಂದ, ಎಂ. ಹಾಗೂ ಪಿ.ಎನ್.ಐ ಶ್ರೀ ಸೈಯದ್ ಖಾಸಿಂ ಸಿಬ್ಬಂದಿಯವರಾದ ಮೋಹನ್ ನಾರಾಯಣಸ್ವಾಮಿ, ಮೆಹಬೂಬ್ ಪಾಷಾ, ಶ್ರೀನಾಥ, ಕಿಶೋರ, ಶಾ ಮೂರ್ತಿ, ಬಾಲಾಜಿ ಹೆಚ್.ವಿ.ಗಂಗಾಧರ ಜೀನ್ ಚಾಲಕರಾದ ಮುರುಳಿ ಮತ್ತು ತಾಂತ್ರಿನ ವಿಭಾಗದ ಸಿಬ್ಬಂದಿಯಾದ ಪಿ.ಸಿ ಮುರುಳಿ ರವರ ತಂಡವು ಹಲವಾರು ಸಿಸಿ ಕ್ಯಾಮರಗಳು ಹಾಗೂ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಆರೋಪಿಗಳನ್ನು ರಾಯಚೂರು ಜಿಲ್ಲೆಯ ಸಿಂದನೂರು ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದು ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಆಯುಧಗಳು, ಏರ್ಕಿನ್, ಮಂಕೀಕ್ಯಾಪ್ ಮತ್ತು ಕೃತ್ಯಕ್ಕೆ ಬಳಸಿದ್ದ 03 ದ್ವಿಚಕ್ರ ವಾಹನಗಳನ್ನು ಅಮಾನತ್ತುಪಡಿಸಿಕೊಂಡು ಅರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತೆ.

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ

1) ರೋಹಿತ್ ಗಿರಿ @ ನೇಪಾಳಿ ತಂದೆ ಧನರಾಜ್ ಗಿರಿ, 22 ವರ್ಷ, ಇಂದಿರಾ ಕ್ಯಾಂಟೀನ್ ಹತ್ತಿರ, 3ನೇ ಕ್ರಾನ್, ನ್ಯೂ ತಿಪ್ಪಸಂದ್ರ, ಬೆಂಗಳೂರು.

2) ಬಾದಾಪೀರ್ ತಂದೆ ರಂಜನ್ ನಾಟ್, 19 ವರ್ಷ, ಮೆಕಾನಿಕ್ ಕೆಲಸ ಮುರುಗೇಶ್ ಪಾಳ್ಯ, ಬೆಂಗಳೂರು ಸ್ವಂತ ವಿಳಾಸ ಹುಲ್ಲೂರು ಗ್ರಾಮ, ಮಸ್ಕಿ ತಾಲ್ಲೂಕು ರಾಯಚೂರು ಜಿಲ್ಲೆ.

ಈ ಆರೋಪಿಗಳು ಕೋಲಾರ ನಗರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಟೌನ್, ಪೆರೇಸಂದ್ರ, ಚಿಂತಾಮಣಿ ಟೌನ್, ಹುಮಕೂರು ನಗರ, ನೆಲಮಂಗಲ, ದೇವನಹಳ್ಳಿ, ರಾಮನಗರ ಹಾಗೂ ರಾಜ್ಯದ ಇನ್ನೂ ಹಲವಾರು ಕಡೆ ರಾತ್ರಿ ವೇಳೆ ಅಂಗಡಿಗಳ ರೋಲಿಂಗ್ ಪಟರ್ ಹೊಡೆದು ಹಣ ಕಳವು ಮಾಡಿರುವುದು ತನಿಖೆಯಿಂದ ತಿಳಿದಿರುತ್ತೆ.

ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಕೋಲಾರ ಜಿಲ್ಲಾ ಪೊಲೀಸ್ ನರಿಷ್ಠಾಧಿಕಾರಿಗಳು ಶ್ಲಾಘಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ ತಂಡಕ್ಕೆ ಬಹುಮಾನವನ್ನು ಘೋಷಿಸಿರುತ್ತಾರೆ.

Exit mobile version