Home ತಾಜಾ ಸುದ್ದಿ ಹುಬ್ಬಳ್ಳಿ-ಬೆಂಗಳೂರು ಮತ್ತೊಂದು ವಿಮಾನ

ಹುಬ್ಬಳ್ಳಿ-ಬೆಂಗಳೂರು ಮತ್ತೊಂದು ವಿಮಾನ

0

ನವದೆಹಲಿ: ರಾಜ್ಯದ ರಾಜಧಾನಿಯೊಂದಿಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಈಗ ಮತ್ತೊಂದು ವಿಮಾನಯಾನ ಶೀಘ್ರದಲ್ಲಿಯೇ(ಮಾರ್ಚ್‌ 30ರಿಂದ) ಆರಂಭವಾಗಲಿದೆ. ಇದರೊಂದಿಗೆ ದಿನಕ್ಕೆ ಮೂರು ವಿಮಾನಗಳು ಬೆಂಗಳೂರು ಮತ್ತು ಹುಬ್ಬಳ್ಳಿ ಮಧ್ಯ ಸಂಚಾರ ಮಾಡಲಿವೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಇಂಡಿಗೋ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಈ ಸೇವೆ ಆರಂಭಿಸುವ ಕುರಿತು ಚರ್ಚಿಸಿದ್ದರ ಫಲವಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಬೆಂಗಳೂರು-ಹುಬ್ಬಳ್ಳಿ ೬ಇ ೭೦೫೬ ಬೆಳಗ್ಗೆ ೯.೫೫-೧೧.೨೦ ಕ್ಕೆ ಹಾಗೂ ಹುಬ್ಬಳ್ಳಿ-ಬೆಂಗಳೂರು ೬ಇ ೭೨೬೩ ಬೆಳಗ್ಗೆ ೧೧.೫೫-ಮಧ್ಯಾಹ್ನ ೧.೨೦ ಕ್ಕೆ ತಲುಪಲಿದೆ.
ಹುಬ್ಬಳ್ಳಿ-ಬೆಂಗಳೂರ ನಡುವೆ ಮತ್ತೊಂದು ವಿಮಾನ ಸೇವೆಗೆ ಅವಕಾಶ ಕಲ್ಪಿಸಿದ್ದಕ್ಕಾಗಿ ಸಚಿವ ಜೋಶಿಯವರು ಇಂಡಿಗೋ ಆಡಳಿತ ವರ್ಗಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ. ಈ ಸೇವೆಯಿಂದ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದ್ದಾರೆ.
ಇದೇ ಸಮಯದಲ್ಲಿಯೇ ಹುಬ್ಬಳ್ಳಿ ಮತ್ತು ಅಹ್ಮದಾಬಾದ ನಡುವೆ ವಿಮಾನಯಾನ ಆರಂಭಿಸಲೂ ಜೋಶಿಯವರು ಇಂಡಿಗೋ ಅಧಿಕಾರಿಗಳಲ್ಲಿ ವಿನಂತಿಸಿದ್ದಾರೆ.

Exit mobile version