Home ಅಪರಾಧ ಹುಬ್ಬಳ್ಳಿ: ಎನ್‌ಕೌಂಟರ್‌ಗೆ ಬಲಿಯಾದ ರಿತೇಶ ಶವ ಕೊನೆಗೂ ಅಂತ್ಯಕ್ರಿಯೆ

ಹುಬ್ಬಳ್ಳಿ: ಎನ್‌ಕೌಂಟರ್‌ಗೆ ಬಲಿಯಾದ ರಿತೇಶ ಶವ ಕೊನೆಗೂ ಅಂತ್ಯಕ್ರಿಯೆ

0

ಹುಬ್ಬಳ್ಳಿ: ಇಪ್ಪತ್ತು ದಿನಗಳ ಹಿಂದೆ ಇಲ್ಲಿನ ವಿಜಯನಗರ ಬಡಾವಣೆಯಲ್ಲಿ 5 ವರ್ಷದ ಬಾಲಕಿ ಹತ್ಯೆ ಮಾಡಿ ಬಳಿಕ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದ ಆರೋಪಿ ರಿತೇಶ್‌ಕುಮಾರ್ ಶವವನ್ನು ಹಿಂದೂ ವಿಧಿ ವಿಧಾನದ ಪ್ರಕಾರ ಇಲ್ಲಿನ ಬಿಡ್ನಾಳ ರುದ್ರಭೂಮಿಯಲ್ಲಿ ಹುಬ್ಬಳ್ಳಿ ನಗರ ತಹಶೀಲ್ದಾರ್ ಕಲಗೌಡ ಪಾಟೀಲ ಸಮ್ಮುಖದಲ್ಲಿ ಶನಿವಾರ ಅಂತ್ಯಕ್ರಿಯೆ ಮಾಡಲಾಯಿತು
ಮಧ್ಯಾಹ್ನ ಕಿಮ್ಸ್ ಶವಾಗಾರದಿಂದ ಶವವನ್ನು ಅಂತ್ಯ ಸಂಸ್ಕಾರ ಕಾರ್ಯಕ್ಕೆ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಯಿತು.
ಅಂತ್ಯಸಂಸ್ಕಾರದ ಬಳಿಕ ಮಾತನಾಡಿದ ಹುಬ್ಬಳ್ಳಿ ನಗರ ತಹಶೀಲ್ದಾರ ಕಲಗೌಡ ಪಾಟೀಲ, ಹೈಕೋರ್ಟ್ ಆದೇಶದ ಪ್ರಕಾರ ಆರೋಪಿ ರಿತೇಶ್‌ಕುಮಾರ ಶವವನ್ನು ಸಿಐಡಿ ಎಸ್ಪಿ, ಎಸಿಪಿ, ಪಾಲಿಕೆ ಅಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು, ಸಿಬ್ಬಂದಿ ಸಮ್ಮುಖದಲ್ಲಿ ಮಣ್ಣು ಮಾಡಲಾಗಿದೆ. ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ಹೆಚ್ಚಿಗೆ ಏನನ್ನೂ ಹೇಳುವುದಿಲ್ಲ ಎಂದು ಹೇಳಿದರು.

Exit mobile version