Home ಅಪರಾಧ ಹಿಂದೂ ಯುವತಿಯರಿಗೆ ಬ್ಲ್ಯಾಕ್ ಮೇಲ್: ಯುವಕ ವಶಕ್ಕೆ

ಹಿಂದೂ ಯುವತಿಯರಿಗೆ ಬ್ಲ್ಯಾಕ್ ಮೇಲ್: ಯುವಕ ವಶಕ್ಕೆ

0

ಧಾರವಾಡ: ಹಿಂದೂ ಯುವತಿಯರಿಗೆ ಮಸೇಜ್ ಮಾಡಿ ಕಾಡಿಸುತ್ತಿದ್ದ ಯುವಕನಿಗೆ ಹಿಂದೂ ಕಾರ್ಯಕರ್ತರು ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಎಲೆಕ್ಟ್ರಾನಿಕ್‌ ಉತ್ಪನ್ನಗಳ ಮಾರಾಟ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಫಯಾಜ್ ಎಂಬಾತನನ್ನು ಉಪನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಂಗಡಿಗೆ ಬರುತ್ತಿದ್ದ ಹಿಂದೂ ಯುವತಿಯರು ಖರೀದಿ ವೇಳೆ ನೀಡುತ್ತಿದ್ದ ಮೊಬೈಲ್ ನಂ‌ಬರ್‌ಗಳನ್ನು ಹೆಕ್ಕಿ ತೆಗದು ಸಂಪರ್ಕಿಸುತ್ತಿದ್ದ ಫಯಾಜ್ ಬಳಿಕ ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

Exit mobile version