ವಿಜಯಪುರ: ನಗರದಲ್ಲಿ ತಮ್ಮ ವಿರುದ್ಧ ಅಥವಾ ವಕ್ಫ್ ನೆಪದಲ್ಲಿ ನಡೆಯುವ ಹೋರಾಟದ ಸಮಯದಲ್ಲಿ ಅಕಸ್ಮಾತ್ ಹಿಂದೂಗಳ ಆಸ್ತಿ ಪಾಸ್ತಿಗಳಿಗೆ ಹಾನಿಯಾದರೆ, ಹೋರಾಟಕ್ಕೆ ಕರೆ ನೀಡಿದ ಮುಖಂಡರು ಹಾಗೂ ಹೋರಾಟಗಾರರ ಮೇಲೆ ಕಾನೂನು ಕ್ರಮ ಜರುಗಿಸುವವಂತೆ ಒತ್ತಾಯಿಸಿ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಗೃಹ ಸಚಿವರು, ಪೊಲೀಸ್ ಮಹಾನಿರ್ದೇಶಕರು, ಐಜಿಪಿ ಉತ್ತರ ವಲಯ ಬೆಳಗಾವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಏ. 28ರಂದು ಕೆಲವು ಅಲ್ಪಸಂಖ್ಯಾತ ಮುಸ್ಲಿಂ ಮುಖಂಡರು ನನ್ನ ವಿರುದ್ಧ ವಿಜಯಪುರ ನಗರದಲ್ಲಿ ಹೋರಾಟಕ್ಕೆ ಕರೆ ನೀಡಿದ್ದು, ಅಲ್ಲದೆ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧವಾಗಿಯೂ ಹೋರಾಟಕ್ಕೆ ಸಜ್ಜಾಗಿರುವುದು ತಿಳಿದು ಬಂದಿದೆ. ಈ ಹೋರಾಟದಲ್ಲಿ ಭಾಗವಹಿಸಿದವರಿಂದ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳಾಗಲಿ ಅಥವಾ ಹಿಂದೂಗಳ ಮೇಲಾಗಲಿ ಅಥವಾ ಹಿಂದೂಗಳ ಆಸ್ತಿಪಾಸ್ತಿಗಳಿಗೆ ಹಾನಿಯುಂಟು ಮಾಡುವುದಾಗಲಿ ಆಗಿದ್ದೆ ಆದರೆ, ಹೋರಾಟಕ್ಕೆ ಕರೆ ನೀಡಿದ ಈ ಮುಖಂಡರನ್ನೇ ಜವಾಬ್ದಾರಿಯನ್ನಾಗಿಸಿ. ಅವರಿಂದಲೇ ಹಾನಿಯನ್ನು ಭರಿಸಿಕೊಳ್ಳವ ಮತ್ತು ಅವರ ಮೇಲೆ ಕಾನೂನು ಕ್ರಮ ಜರುಗಿಸುವ ಕುರಿತು ಮುಂಚಿತವಾಗಿಯೇ ಮುಚ್ಚಳಿಕೆಯನ್ನು ಬರೆಯಿಸಿಕೊಳ್ಳಬೇಕು. ಏಕೆಂದರೆ, ಇವರು ಕರೆ ಕೊಟ್ಟಿರುವ ಹೋರಾಟದ ಉದ್ದೇಶ ಸರಿಯಿಲ್ಲ. ಈ ಮುಖಂಡರು ಕಿಡಿಗೇಡಿಗಳು ಮಾಡಿದ ಕೃತ್ಯ ಎಂದು ಹಿಂಜರಿದು ಕೈ ತೊಳೆದುಕೊಂಡು ಹೋಗುವ ಸಂಭವವಿರುತ್ತದೆ ಎಂದಿದ್ದಾರೆ.
ಪತ್ರಿಯೊಬ್ಬರ ಹೋರಾಟಗಾರರ ಮೇಲೆ ನಿಗಾವಹಿಸಿ, ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಬೇಕೆಂದು ಒತ್ತಾಯಿಸಿದ್ದಾರೆ.