Home News ಹಾವೇರಿಯಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆ

ಹಾವೇರಿಯಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆ

ಹಾವೇರಿ: ಜಿಲ್ಲಾದ್ಯಂತ ರವಿವಾರ ಸಂಜೆ ಗುಡುಗು, ಸಿಡಿಲು, ಗಾಳಿ ಸಹಿತವಾಗಿ ಮಳೆ ಸುರಿದಿದೆ.
ರಟ್ಟೀಹಳ್ಳಿ ಭಾಗದಲ್ಲಿ ಗಾಳಿಗೆ 80ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು, ಹತ್ತಾರು ಮರಗಳು ಧರೆಗುರುಳಿ ಅವಾಂತರ ಸೃಷ್ಟಿಯಾಗಿದೆ. ರಟ್ಟೀಹಳ್ಳಿ ಪಟ್ಟಣದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಸುಮಾರು ಅರ್ಧ ಗಂಟೆ ಕಾಲ ಭಾರೀ ಮಳೆ ಸುರಿದಿದೆ. ಮರ ಬಿದ್ದ ಪರಿಣಾಮವಾಗಿ ರಟ್ಟೀಹಳ್ಳಿ-ಮಾಸೂರು ಮಾರ್ಗದ ಸಂಚಾರ ಬಂದ್‌ ಆಗಿದೆ. ಕೆಲವು ಮನೆಗಳ ಮೇಲ್ಛಾವಣಿ ಹಾರಿಹೋಗಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಹಾವೇರಿ ನಗರದಲ್ಲಿ ಸಂಜೆ 7 ಗಂಟೆ ವೇಳೆಗೆ ಭಾರಿ ಗಾಳಿ, ಗುಡುಗು, ಮಿಂಚಿನ ಆರ್ಭಟದೊಂದಿಗೆ ಅರ್ಧ ಗಂಟೆ ಮಳೆ ಸುರಿದಿದೆ. ರಾಣಿಬೆನ್ನೂರು, ಬ್ಯಾಡಗಿ, ಹಾನಗಲ್ಲ ಭಾಗದಲ್ಲೂ ಮಳೆಯಾಗಿದೆ.ಗಾಳಿ ರಭಸಕ್ಕೆ ಪಟ್ಟಣ ಹಾಗೂ ನಗರ ಭಾಗದಲ್ಲಿ ವಿದ್ಯುತ್‌ ಕಂಬಗಳು ಮುರಿದು ಬಿದ್ದಿದ್ದರ ಪರಿಣಾಮವಾಗಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದೆ.

Exit mobile version