ಹುಬ್ಬಳ್ಳಿ: ಇಲ್ಲಿನ ಕೆಎಲ್ ಇ ಸಂಸ್ಥೆಯ ಶ್ರೀಮತಿ ಸಿ.ಐ. ಮುನವಳ್ಳಿ ಪಾಲಿಟೆಕ್ನಿಕ್‌ನ 1996ರಿಂದ 2020ನೇ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳ ಸಂಘದಿಂದ ‘ಗುರುವಂದನಾ’ ಬ್ಯಾಕ್ ಟು ಕ್ಯಾಂಪಸ್’ ಗೆ ಕಾರ್ಯಕ್ರಮ ರವಿವಾರ ವಿಜೃಂಭಣೆಯಿಂದ ಜರುಗಿತು. ಇಲ್ಲಿನ ಬಿವಿಬಿ ಕ್ಯಾಂಪಸ್ ಸಿಐಎಂ ಪಾಲಿಟೆಕ್ನಿಕ್ ಕಾಲೇಜಿನಿಂದ ನಿವೃತ್ತ-ಹಾಲಿ ಗುರುಗಳನ್ನು ಬಯೋಟೆಕ್ ಸಭಾಂಗಣದವರೆಗೂ ಪುಷ್ಪವೃಷ್ಟಿ ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಸುಮಾರು ಗುರುಗಳ ಪಾದಪೂಜೆ ಮಾಡಿ ಸತ್ತರಿಸಿ ಗುರುವಂದನೆ ಸಲ್ಲಿಸಿದರು. ಕಾಲೇಜಿನಲ್ಲಿ ಸರಸತಿ ನೆರವೇರಿಸಿದರು. ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳು ನೆರವೇರಿದವು. ಕಾರ್ಯಕ್ರಮ ನಿಮಿತ್ತ ಸಂಗ್ರಹಿಸಿ ಉಳಿದ ಹಣವನ್ನು ಸೈನ್ಯಕ್ಕೆ ನೀಡಿದರು. ವಿವಿಧೆಡೆಯಿಂದ ಆಗಮಿಸಿದ ಹಳೇ ವಿದ್ಯಾರ್ಥಿಗಳು ಸಮಾರಂಭಕ್ಕೆ ಸಾಕ್ಷಿಯಾದರು. ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಹಳೇ ವಿದ್ಯಾರ್ಥಿ, ನಿರಾಣಿ ಗ್ರೂಪ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ, ನಾವು ಕಲಿತ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಮ್ಮಿಲನ, ಗುರುವಂದನಾ ಕಾರ್ಯಕ್ರಮ ಪೂರ್ಣವಾಗಿರುವುದು ಸಂತಸ ವಿಚಾರ. ಹಳೇ ವಿದ್ಯಾರ್ಥಿಗಳ ಸಂಘದಿಂದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುತ್ತಿರುವುದು ಶ್ಲಾಘನೀಯ ಕಾರ್ಯ. ಈ ಕಾರ್ಯಕ್ಕೆ ತಮ್ಮ ನಿರಾಣಿ ಸಂಸ್ಥೆಯಿಂದ ನೆರವು ನೀಡುವುದಾಗಿ ಘೋಷಿಸಿದರು.
ಹಳೇ ವಿದ್ಯಾರ್ಥಿ ಹಾಗೂ ಡಿಆರ್‌ಡಿಒ ಯೋಜನಾ ನಿರ್ದೇಶಕ, ಹಿರಿಯ ವಿಜ್ಞಾನಿ ಮಲ್ಲಿಕಾರ್ಜುನ ಉಪ್ಪಾರ ಮಾತನಾಡಿ, ತಂತ್ರಜ್ಞಾನ ಜತೆಗೆ ಇಂದು ಕೌಶಲ ಬಹುಮುಖ್ಯವಾಗಿದೆ. ಹಿಂದಿನ ಹಾಗೂ ಇಂದಿನ ಪೈಪೋಟಿಯಲ್ಲಿ ಸಾಕಷ್ಟು ಅಂತರವಿದೆ. ಕೌಶಲಧಾರಿತ ಶಿಕ್ಷಣಕ್ಕೆ ಮಾತ್ರ ಮೌಲ್ಯವಿದೆ ಎಂದರು. ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಶಂಕರಣ್ಣ ಮುನವಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಇಲ್ಲಿ ಕಲಿತು ದೇಶದ ವಿದೇಶದ ಬಹುದೊಡ್ಡ ಕಂಪನಿಗಳಲ್ಲಿ ಹುದ್ದೆ ಸ್ವಂತ ಉದ್ದಿಮೆ ಹೊಂದಿದ್ದರು. ಪುನಃ ಕಾಲೇಜಿಗೆ ಆಗಮಿಸಿದಾಗ ನಿಮ್ಮಲ್ಲಿ ಅಂದಿನ ದಿನಗಳ ನೆನಪುಗಳನ್ನು ಗಮನಿಸಿದೆ. ಕಲಿತ ಕಾಲೇಜಿಗೆ, ಹುಟ್ಟಿದ ಊರಿಗೆ ಏನಾದರೂ ಕೊಡುಗೆ ನೀಡಬೇಕು ಎಂದರು.
ವೀರೇಶ ಅಂಗಡಿ, ಎಂ.ಆರ್. ಪಾಟೀಲ್, ಎಸ್.ಸಿ ಅಳಗುಂಡಗಿ, ನಿಖಿಲೇಶ ಕುಂದಗೋಳ, ಶಿವಾನಂದ ದಂಡಾವತಿಮಠ, ಪ್ರವೀಣ ಕುಂದಗೋಳ, ಶ್ರೀನಿವಾಸ ಗೋದಿ, ಶ್ರೀಕಾಂತ ಸೊಗಲದ , ಸುಧೀರ್ ಹೊಸಮನಿ, ವಿಜಯಲಕ್ಷ್ಮಿ, ಅಂಜಲಿ ಗೊಬ್ಬಣ್ಣವರ, ವಿಜಯಲಕ್ಷ್ಮಿ ಪಟ್ಟಣ, ರೂಪ ಮುದುಗಲ, ಪ್ರೀತಿ ಎಸ್ , ವಾಣಿಶ್ರೀ ಡಿ ಎನ್, ಸುಪ್ರಿತಾ, ವಿದ್ಯಾ ಕೊಪ್ಪಳ, ಸಂತೋಷ ಖೈರೆ, ದೀಪಕ ಉಗರಗೋಳ ಸೇರಿದಂತೆ ಇನ್ನಿತರರಿದ್ದರು.