Home News ಹಳೆ ದಾಖಲೆಗಳನ್ನು ಮುರಿದು ಇತಿಹಾಸದ ಅಧ್ಯಾಯ ಬರೆದ KSDL

ಹಳೆ ದಾಖಲೆಗಳನ್ನು ಮುರಿದು ಇತಿಹಾಸದ ಅಧ್ಯಾಯ ಬರೆದ KSDL

KSDL ಶತಮಾನಕ್ಕೂ ಮೀರಿದ ಇತಿಹಾಸವಿರುವ ಕರ್ನಾಟಕದ ಹೆಮ್ಮೆಯ KSDL ಸಂಸ್ಥೆ

ಬೆಂಗಳೂರು: ರಾಜ್ಯ ಸರಕಾರದ ನಿರಂತರ ಪ್ರೋತ್ಸಾಹದ ಫಲವಾಗಿ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು KSDL ಇತಿಹಾಸದ ನೂತನ ಅಧ್ಯಾಯವನ್ನು ಬರೆದಿದೆ ಎಂದು ಕೈಗಾರಿಕೆ ಸಚಿವ ಎಂ. ಬಿ ಪಾಟೀಲ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಹಿಂದಿನ ಎಲ್ಲ ದಾಖಲೆ ಮುರಿದು ಇತಿಹಾಸದ ನೂತನ ಅಧ್ಯಾಯ ಬರೆದಿರುವ KSDL ಶತಮಾನಕ್ಕೂ ಮೀರಿದ ಇತಿಹಾಸವಿರುವ ಕರ್ನಾಟಕದ ಹೆಮ್ಮೆಯ KSDL ಸಂಸ್ಥೆ #ನಮ್ಮಸರಕಾರ ದ ನಿರಂತರ ಪ್ರೋತ್ಸಾಹದ ಫಲವಾಗಿ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಇತಿಹಾಸದ ನೂತನ ಅಧ್ಯಾಯವನ್ನು ಬರೆದಿದೆ! 2024-25ನೇ ಸಾಲಿನಲ್ಲಿ ₹1,787 ಕೋಟಿ ವಹಿವಾಟು ನಡೆಸಿ ₹416 ಕೋಟಿ ನಿವ್ವಳ ಲಾಭಗಳಿಸಿದೆ.

ಕಳೆದ ವರ್ಷ ರೂ. 362 ಕೋಟಿ ನಿವ್ವಳ ಲಾಭಗಳಿಸಿದ್ದೇ ಈವರೆವಿಗಿನ ದಾಖಲೆಯಾಗಿತ್ತು. ಆದರೆ ಈ ವರ್ಷ ಮತ್ತೊಂದು ಹಂತ ಏರಿರುವುದು ನಮ್ಮ ಸಂತಸ ಹೆಚ್ಚಿಸಿದೆ. ಈ ಬೆಳವಣಿಗೆಗೆ ಕಾರಣರಾದ ಅಧ್ಯಕ್ಷರಾದ ಶ್ರೀ ಸಿ.ಎಸ್. ನಾಡಗೌಡ, ಆಡಳಿತ ವರ್ಗ, ಅಧಿಕಾರಿಗಳಿಗೆ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳು ತಿಳಿಸಿದ್ದಾರೆ.

Exit mobile version