Home News ಸ್ಟೈಫಂಡ್‌ನಲ್ಲಿ 30% ಹೆಚ್ಚಳಕ್ಕೆ ಶಿಫಾರಸು

ಸ್ಟೈಫಂಡ್‌ನಲ್ಲಿ 30% ಹೆಚ್ಚಳಕ್ಕೆ ಶಿಫಾರಸು

ಅಧಿಸೂಚನೆ ಹೊರಡಿಸಿದ ನಂತರ, ಈ ಎರಡು ಯೋಜನೆಗಳ ಅಡಿಯಲ್ಲಿ ಸ್ಟೈಫಂಡ್ ಅಸ್ತಿತ್ವದಲ್ಲಿರುವ 5,000 ಮತ್ತು 9,000 ಶ್ರೇಣಿಯಿಂದ 6,800 ಮತ್ತು 12,300 ಕ್ಕೆ ಹೆಚ್ಚಾಗುತ್ತದೆ.

ನವದೆಹಲಿ: ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಉತ್ತೇಜನ ಯೋಜನೆ ಮತ್ತು ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ತರಬೇತಿ ಯೋಜನೆ ಅಡಿಯಲ್ಲಿ, ಯುವಜನತೆಗೆ ನೀಡಲಾಗುವ ವಿದ್ಯಾರ್ಥಿ ವೇತನದ ಪ್ರಮಾಣವನ್ನು ಶೇಕಡ 30ರಷ್ಟು ಏರಿಕೆ ಮಾಡುವಂತೆ, ಕೇಂದ್ರ ಅಪ್ರೆಂಟಿಸ್ ಶಿಪ್ ಮಂಡಳಿ ಶಿಫಾರಸು ಮಾಡಿದೆ.
ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವ ಜಯಂತ್ ಚೌಧರಿ ಅವರ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಿನ್ನೆ ನಡೆದ ಮಂಡಳಿಯ 38ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಶಿಫಾರಸು ಜಾರಿಗೊಂಡ ಬಳಿಕ, ವಿದ್ಯಾರ್ಥಿ ವೇತನದ ಮೊತ್ತ 5 ಸಾವಿರದಿಂದ 6 ಸಾವಿರದ 800 ಹಾಗೂ 9 ಸಾವಿರದಿಂದ, 12 ಸಾವಿರದ 300ಕ್ಕೆ ಏರಿಕೆಯಾಗಲಿದೆ. ಶಿಕ್ಷಣವನ್ನು ಮಧ್ಯದಲ್ಲೇ ತೊರೆಯುವುದನ್ನು ತಪ್ಪಿಸಲು ಹಾಗೂ ವಿಭಿನ್ನ ವಲಯಗಳಿಗೆ ಅಭ್ಯರ್ಥಿಗಳನ್ನು ಆಕರ್ಷಿಸಲು ವಿದ್ಯಾರ್ಥಿ ವೇತನದ ಮೊತ್ತ ಹೆಚ್ಚಿಸಲಾಗುತ್ತಿದೆ ಎಂದಿದ್ದಾರೆ.

Exit mobile version