Home ತಾಜಾ ಸುದ್ದಿ ಸಿದ್ದರಾಮಯ್ಯ ಕೂಡಲೇ ಕ್ಷಮೆಯಾಚಿಸಬೇಕು: ಯತ್ನಾಳ ಆಗ್ರಹ

ಸಿದ್ದರಾಮಯ್ಯ ಕೂಡಲೇ ಕ್ಷಮೆಯಾಚಿಸಬೇಕು: ಯತ್ನಾಳ ಆಗ್ರಹ

0

ಬೆಂಗಳೂರು: ಬೆಳಗಾವಿಯಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ಧೋರಣೆಯನ್ನು ಖಂಡಿಸಿ ಕಾಂಗ್ರೆಸ್‌ ಆಯೋಜಿಸಿರುವ ಜನಾಕ್ರೋಶ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್‌ ಅಧಿಕಾರ ವಿರುದ್ಧವೇ ಗರಂ ಆದ ಘಟನೆಯ ವೇಳೆ ನಡೆದುಕೊಂಡ ರೀತಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗರಂ ಆಗಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಕರ್ತವ್ಯ ನಿರತ ಹೆಚ್ಚುವರಿ ಎಸ್.ಪಿ ಮೇಲೆ ಕೈ ಕೈ ಮಿಲಾಯಿಸುವ ಹಂತಕ್ಕೆ ಮುಖ್ಯ ಮಂತ್ರಿಗಳು ಹೋಗಿದ್ದು ಅಕ್ಷಮ್ಯ. ಅಧಿಕಾರಿಗಳೊಂದಿಗೆ ಸೌಜನ್ಯತೆಯಿಂದ ವರ್ತಿಸಬೇಕಾಗಿದ್ದ ಮುಖ್ಯ ಮಂತ್ರಿಗಳು ಆಕ್ರಮಣಕಾರಿಯಾಗಿ, ಅನುಚಿತವಾಗಿ ವರ್ತಿಸುತ್ತಿರುವುದು ತರವಲ್ಲ. ಈ ನಿರಂಕುಶ ನಡವಳಿಕೆ ನಿಜಕ್ಕೂ ಖಂಡನಾರ್ಹ. ಹಗಲಿರುಳು ಟೊಂಕಕಟ್ಟಿ ದುಡಿಯುವ ಪೊಲೀಸರ ಮನೋಸ್ಥೈರ್ಯವನ್ನು ಹೆಚ್ಚಿಸುವ ಪ್ರಯತ್ನ ಮಾಡಬೇಕೆ ಹೊರತು ಸಾರ್ವಜನಿಕವಾಗಿ ಅವರಿಗೆ ಅವಮಾನಿಸುವ ಕೆಲಸ ಆಗಬಾರದು. ಸಿದ್ದರಾಮಯ್ಯನವರು ಕೂಡಲೇ ಅಧಿಕಾರಿಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

Exit mobile version