Home ತಾಜಾ ಸುದ್ದಿ ಸಿಂಹದ ಮರಿಯೊಂದಿಗೆ ಪ್ರಧಾನಿ

ಸಿಂಹದ ಮರಿಯೊಂದಿಗೆ ಪ್ರಧಾನಿ

0

ಅಹಮದಾಬಾದ್: ಸಿಂಹದ ಮರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಆಟವಾಡಿ ತುತ್ತಿಟ್ಟು ಮುದ್ದಿಸಿದ್ದಾರೆ.
ಗುಜರಾತಿನ ಜಾಮ್‌ನಗರದಲ್ಲಿರುವ ವಂತಾರದಲ್ಲಿ ವನ್ಯಜೀವಿ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಅಲ್ಲಿನ ಪ್ರಾಣಿಗಳೊಂದಿಗೆ ಸಂತಸದ ಕ್ಷಣಗಳನ್ನು ಕಳೆದ ಪ್ರಧಾನಿ ಮೋದಿ, ಸಿಂಹದ ಮರಿಗಳು ಮತ್ತು ಬಿಳಿ ಸಿಂಹದ ಮರಿಗಳು ಸೇರಿದಂತೆ ವಿವಿಧ ಜಾತಿಯ ಚಿರತೆಗಳಿಗೆ ಆಹಾರ ನೀಡುತ್ತಾ ಆ ಪ್ರಾಣಿಗಳು ಆಟವಾಡುವುದನ್ನು ವೀಕ್ಷಿಸಿದರು.
ದೊಡ್ಡ ಹೆಬ್ಬಾವು, ವಿಶಿಷ್ಟವಾದ ಎರಡು ತಲೆಯ ಹಾವು, ಎರಡು ತಲೆಯ ಆಮೆ, ಟ್ಯಾಪಿರ್ ಅನ್ನು ಮೋದಿ ನೋಡಿದರು. ಇನ್ನು ಚಿರತೆ ಮರಿಗಳನ್ನು ಕೃಷಿ ಜಮೀನಿನಲ್ಲಿ ಬಿಡಲಾಗಿತ್ತು. ಆ ನಂತರ ಗ್ರಾಮಸ್ಥರು ಅವುಗಳನ್ನು ಗುರುತಿಸಿ ರಕ್ಷಿಸಿದರು. ದೈತ್ಯ ನೀರುನಾಯಿ, ಬೊಂಗೊ(ಹುಲ್ಲೆ), ಸೀಲುಗಳು ಸಹ ನೋಡಿದ ನಂತರದಲ್ಲಿ ಸ್ನಾನ ಮಾಡುತ್ತಾ ಆಟವಾಡುತ್ತಿದ್ದ ಆನೆಗಳನ್ನು ಸಹ ನರೇಂದ್ರ ಮೋದಿ ವೀಕ್ಷಿಸಿದರು.

Exit mobile version