Home ತಾಜಾ ಸುದ್ದಿ ಸಾವು ಗೆದ್ದ ಸಾತ್ವಿಕ್: ಮನವಿ ಮಾಡಿದ ಸಚಿವ ಎಂ.ಬಿ ಪಾಟೀಲ್

ಸಾವು ಗೆದ್ದ ಸಾತ್ವಿಕ್: ಮನವಿ ಮಾಡಿದ ಸಚಿವ ಎಂ.ಬಿ ಪಾಟೀಲ್

0

ಬೆಂಗಳೂರು: ಸತತ 20 ಗಂಟೆಗಳ ಕಾರ್ಯಾಚರಣೆ ಮೂಲಕ ಮಗುವನ್ನು ಬದುಕಿಸಲು ಶ್ರಮಿಸಿದ ಎನ್ ಡಿ ಆರ್ ಎಫ್, ಪೊಲೀಸ್ ತಂಡ, ಜಿಲ್ಲಾ ಆಡಳಿತಕ್ಕೆ ಸಚಿವ ಎಂ.ಬಿ ಪಾಟೀಲ್ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ನಮ್ಮೆಲ್ಲರ ಪ್ರಾರ್ಥನೆ ಫಲಿಸಿದೆ. ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಕಂದ ಸಾತ್ವಿಕ್ ಹೊರ ಜಗತ್ತನ್ನು ನೋಡುವಂತಾಗಿದ್ದಾನೆ. ಸತತ 20 ಗಂಟೆಗಳ ಕಾರ್ಯಾಚರಣೆ ಮೂಲಕ ಮಗುವನ್ನು ಬದುಕಿಸಲು ಶ್ರಮಿಸಿದ ನಮ್ಮ ಹೆಮ್ಮೆಯ ಎನ್ ಡಿ ಆರ್ ಎಫ್, ಪೊಲೀಸ್ ತಂಡ, ಜಿಲ್ಲಾ ಆಡಳಿತಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ನಮ್ಮೆಲ್ಲ ಜನರಲ್ಲಿ ಒಂದು ಮನವಿ: ದಯಮಾಡಿ ನೀರು ಬಾರದ, ನೀರು ನೀಡುತ್ತಿರುವ ಕೊಳವೆಬಾವಿಗಳನ್ನು ಉಪೇಕ್ಷೆ ಮಾಡದಿರಿ. ಸೂಕ್ತ ಬಂದೋಬಸ್ತ್ ಮಾಡಿ. ಮುಂದೆ ಎಂದೂ ಎಲ್ಲೂ ಇಂತಹ ಘಟನೆಗಳು ಮರುಕಳಿಸದಿರಲಿ ಎಂದಿದ್ದಾರೆ.

Exit mobile version