ಮಂಗಳೂರು: ಹೊರವಲಯದ ಸಸಿಹಿತ್ಲು ಕಡಲ ತೀರದಲ್ಲಿ ಅಳಿವಿನಚಿನ ಅತ್ಯಂತ ಅಪರೂಪದ ಒಲೀವ್ ರಿಡ್ಲೆ ಕಡಲಾಮೆಗಳು ಕಾಣಿಸಿಕೊಂಡಿವೆ. ಕಡಲಾಮೆ ಒಲೀವ್ ರಿಡ್ಲೆ ಮಂಗಳೂರು ಕಡಲ ಕಿನಾರೆಗೆ ಬಂದು ಮೊಟ್ಟೆ ಇರಿಸಿವೆ.
ಸಸಿಹಿತ್ಲು ಕಡಲ ತಡಿಗೆ ಬಂದು ಮೊಟ್ಟೆ ಇಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೊಟ್ಟೆಗಳ ಸಂರಕ್ಷಣೆಗೆ ಸ್ಥಳೀಯ ಮೀನುಗಾರರ ವಿಶೇಷ ನಿಗಾ ವಹಿಸಿದ್ದಾರೆ. ಈ ಹಿಂದೆ ಮಂಗಳೂರಿನ ಸುತ್ತ ಮುತ್ತ ಸುಮಾರು ೧೨ ಕಡೆ ಕಡಲಾಮೆ ಮೊಟ್ಟೆಗಳು ಪತ್ತೆಯಾಗಿದ್ದವು. ಮಂಗಳೂರು ಕಡಲತಡಿಯ ತಣ್ಣೀರುಬಾವಿ, ಸಸಿಹಿತ್ಲು, ಬೆಂಗ್ರೆ ಪ್ರದೇಶಕ್ಕೆ ಕಡಲಾಮೆಗಳು ಬರುತ್ತಿದ್ದವು.
ಅಳಿವಿನಂಚಿನಲ್ಲಿದ್ದ ಒಲೀವ್ ರಿಡ್ಲೆ ತಳಿಯ ಕಡಲಾಮೆಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸೂಚಿ ೧ರ ಅಡಿಯಲ್ಲಿ ರಕ್ಷಣೆ ಮಾಡಲಾಗುತ್ತದೆ. ಒಲೀವ್ ರಿಡ್ಲೆ ಕಡಲಾಮೆಗಳ ವಿಶೇಷವೆಂದರೆ ತಾವು ಹುಟ್ಟಿದ ಜಾಗಕ್ಕೆ ಮರಳಿ ಬಂದು ಮೊಟ್ಟೆಯಿಡುತ್ತವೆ.