Home ತಾಜಾ ಸುದ್ದಿ ಸಚ್೯ ವಾರಂಟ್ ಸಹಿತ ಜಿಲ್ಲಾ ಆಸ್ಪತ್ರೆಗೆ ಲಗ್ಗೆ ಇಟ್ಟ ಲೋಕಾಯುಕ್ತ ಅಧಿಕಾರಿಗಳು

ಸಚ್೯ ವಾರಂಟ್ ಸಹಿತ ಜಿಲ್ಲಾ ಆಸ್ಪತ್ರೆಗೆ ಲಗ್ಗೆ ಇಟ್ಟ ಲೋಕಾಯುಕ್ತ ಅಧಿಕಾರಿಗಳು

0

ಬಳ್ಳಾರಿ: ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಹಿನ್ನಲೆಯಲ್ಲಿ‌ ಲೋಕಾಯುಕ್ತ ಅಧಿಕಾರಿಗಳಿಂದ ಜಿಲ್ಲಾ ಬಿಮ್ಸ್ ಆಸ್ಪತ್ರೆಗೆ ಸಚ್೯ ವಾರಂಟ್ ಸಹಿತ ಆಗಮಿಸಿದ್ದಾರೆ.
ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದಲ್ಲಿ 25 ಕ್ಕೂ ಹೆಚ್ಚು ಲೋಕಾಯುಕ್ತ ಸಿಬ್ಬಂದಿಗಳು ಆಗಮಿಸಿದ್ದಾರೆ. ಬಳ್ಳಾರಿ, ಹೊಸಪೇಟೆ ಜಿಲ್ಲೆಯ ಲೋಕಾಯುಕ್ತ ಸಿಬ್ಬಂದಿ ಭೇಟಿ ನೀಡಿದ್ದಾರೆ. ಬಾಣಂತಿಯರ ಸರಣಿ ಸಾವಿನ ಬಗ್ಗೆ ಲೋಕಾಯುಕ್ತ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಸಚ್೯ ವಾರಂಟ್ ಹಾಗೂ ಪಂಚರ ಸಮಕ್ಷಮ ಆಗಮಿಸಿದ್ದಾರೆ. ಜಿಲ್ಲಾ ಆಸ್ಪತ್ರೆ ಮತ್ತು ವಿಮ್ಸ್ ಗೆ ಪ್ರತ್ಯೇಕ ತಂಡಗಳಲ್ಲಿ ಭೇಟಿ ನೀಡಿದ್ದು, ಬಾಣಂತಿಯರ ‌ಸಾವಿನ ನಿಗೂಢತೆ ಕುರಿತು ತನಿಖೆ ನಡೆಸಿದ್ದಾರೆ.‌
ಹೆರಿಗೆ, ಐಸಿಯು, ಔಷಧಿ ದಾಸ್ತಾನು ಉಗ್ರಾಣಕ್ಕೆ ಭೇಟಿ ಪರಿಶೀಲನೆ‌ ಮಾಡುತ್ತಿದ್ದಾರೆ.

Exit mobile version