ಬೆಳಗಾವಿ: ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ವ್ಯಕ್ತಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಮೂಲದ ಮೋಹಿತ್ ನರಸಿಂಹಮೂರ್ತಿ(೩೮) ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಈ ಕುರಿತು ಕ್ರಮ ಕೈಗೊಳ್ಳುವಂತೆ ಬೆಳಗಾವಿ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ದೌರ್ಜನ್ಯ ಸಮತಿಯ ಸದಸ್ಯ ವಿಜಯ (ಯಲ್ಲಪ್ಪ) ಬಸಪ್ಪ ತಳವಾರ ಎಂಬುವವರು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಸಚಿವರಿಗೆ ನಿಂದನೆ ಮಾಡಿದ ವ್ಯಕ್ತಿಯ ಜಾಡು ಬೆನ್ನಟ್ಟಿದ ಪೊಲೀಸರು ಬುಧವಾರ ತುಮಕೂರು ಮೂಲದ ಮೋಹಿತ್ ನರಸಿಂಹಮೂರ್ತಿ ಎಂಬುವರನ್ನು ಬಂಧಿಸಿ ಬೆಳಗಾವಿ ಕೋರ್ಟ್‌ಗೆ ಕರೆತಂದು ಹಾಜರುಪಡಿಸಿದ್ದಾರೆ.