ಇಳಕಲ್ : ಕೂಡಲಸಂಗಮದ ಸಂಗಮೇಶ್ವರ ಜಾತ್ರೆಗೆ ನಾಲ್ಕು ಹನಿ ಮಳೆ ಬರುತ್ತೆ ಎಂಬ ಹಿರಿಯರ ಮಾತು ಸುಳ್ಳಾಗಲಿಲ್ಲ
ಶುಕ್ರವಾರದಂದು ಕೂಡಲಸಂಗಮದಲ್ಲಿ ರಥ ಏಳೆಯುವ ಸಮಯದಲ್ಲಿ ನಗರದಲ್ಲಿ ಭಾರೀ ಗುಡುಗು, ಸಿಡಿಲು ಮಿಂಚು ಜೊತೆಗೆ ಭಾರೀ ಬಿರುಗಾಳಿಯಲ್ಲಿ ಕೆಲಕಾಲ ಅಶ್ವಿನಿ ಮಳೆ ಸುರಿಯಿತು
ಮಧ್ಯಾಹ್ನದಿಂದಲೇ ನೆತ್ತಿ ಸುಡುವ ಬಿಸಿಲಿಗೆ ಹೈರಾಣಾಗಿದ್ದ ಜನರಿಗೆ ಸಂಜೆ ಐದು ಗಂಟೆಯಿಂದಲೇ ತಂಪಾದ ಗಾಳಿ ಬೀಸಲು ಆರಂಭಿಸಿತ್ತು.ನಂತರ ಆರು ಗಂಟೆಯ ಸುಮಾರಿಗೆ ಬಿರುಸಾದ ಮಳೆ ಸುರಿದು ಹವಾಮಾನವನ್ನು ಮತ್ತಷ್ಟು ತಂಪಾಗಿಸಿತು.