Home ಸುದ್ದಿ ದೇಶ ‘ಶೋಲೆ’ ಸಿನಿಮಾದ ಬೀರ್‌ಬಲ್: ಹೃದಯಘಾತದಿಂದ ನಿಧನ!

‘ಶೋಲೆ’ ಸಿನಿಮಾದ ಬೀರ್‌ಬಲ್: ಹೃದಯಘಾತದಿಂದ ನಿಧನ!

0

ಬಾಲಿವುಡ್‌ ಚಿತ್ರರಂಗದ ಹಿರಿಯ ನಟ, ‘ಶೋಲೆ’ ಖ್ಯಾತಿಯ ಸತೀಂದರ್‌ ಕುಮಾರ್‌ ಖೋಸ್ಲಾ ಮಂಗಳವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸತೀಂದರ್‌ ಕುಮಾರ್‌ ಬೀರಬಲ್‌ ಎಂದೇ ಹೆಸರಾಗಿದ್ದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ‘ಶೋಲೆ’ಯಲ್ಲಿ ಬೀರ್‌ಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಇವರು ಅದೇ ಪಾತ್ರದಿಂದಲೇ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು. ಅಲ್ಲದೇ ಬೀರ್‌ಬಲ್ ಎಂದೇ ಖ್ಯಾತಿಪಡೆದಿದ್ದರು. 1967ರಲ್ಲಿ ತೆರೆ ಕಂಡ ಮನೋಜ್‌ ಕುಮಾರ್‌ ಅವರ ‘ಉಪ್ಕಾರ್‌’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಇವರು ಬೀರಬಲ್‌ ಎಂದೇ ಹೆಸರಾಗಿದ್ದರು. ಉಪ್‌ಕಾರ್‌, ರೋಟಿ ಕಪ್ಡಾ ಔರ್‌ ಮಕಾನ್‌, ಕ್ರಾಂತಿ, ನಸೀಬ್‌, ಯಾರಾನಾ, ಹಮ್‌ ಹೈ ರಹಿ ಪ್ಯಾರ್‌ ಕೆ, ಅಂಜಾಮ್‌ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಲ್ಲಾ ಭಾಷೆಗಳೂ ಸೇರಿ ಒಟ್ಟು 500 ಸಿನಿಮಾಗಳಲ್ಲಿ ನಟಿಸಿದ್ದಾರೆ.

Exit mobile version