Home ನಮ್ಮ ಜಿಲ್ಲೆ ಧಾರವಾಡ ಶೆಟ್ಟರ್ ಬಿಜೆಪಿ ಸೇರ್ಪಡೆ: ವರಿಷ್ಠರ ತೀರ್ಮಾನ ಸ್ವಾಗತಿಸುತ್ತೇ‌ನೆ

ಶೆಟ್ಟರ್ ಬಿಜೆಪಿ ಸೇರ್ಪಡೆ: ವರಿಷ್ಠರ ತೀರ್ಮಾನ ಸ್ವಾಗತಿಸುತ್ತೇ‌ನೆ

0

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಘರ ವಾಪಸಿ ಬಗ್ಗೆ ಪ್ರತಿಕ್ರಿಸಿದ ಮಹೇಶ ಟೆಂಗಿನಕಾಯಿ, ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ರಾಷ್ಟ್ರೀಯ ಘಟಕದಿಂದ ರಾಜ್ಯ ಘಟಕದ ಜೊತೆ ಚರ್ಚಿಸಿರಬಹುದು. ಮಾಹಿತಿ ನನಗೆ ಇಲ್ಲ. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೆಟ್ಟರ್ ಆಗುತ್ತಾರೆ ಎಂಬ ವದಂತಿ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇಲ್ಲಿ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಅಭ್ಯರ್ಥಿ ಘೋಷಣೆ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದರು. ನಮ್ಮ ಮನಿಸು ನಮಗೆ ಮುಖ್ಯವಲ್ಲ. ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಆಡಳಿತಕ್ಕೆ ತರಲು ಶ್ರಮಿಸುವುದಾಗಿ ಹೇಳಿದರು.

Exit mobile version