ಬೆಂಗಳೂರು: ಗೃಹಲಕ್ಷ್ಮಿ ಹಣದಿಂದ ಬಿ.ಇಡಿ ವಿದ್ಯಾರ್ಥಿಯೊಬ್ಬ ತನ್ನ 4ನೇ ಸೆಮಿಸ್ಟರ್ ಪರೀಕ್ಷೆಯ ಶುಲ್ಕ ಕಟ್ಟಿರುವುದನ್ನು ಕೇಳಿ ನಿಜಕ್ಕೂ ಖುಷಿಯಾಯಿತು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ರಾಜ್ಯದಲ್ಲಿಂದು ಗೃಹಲಕ್ಷ್ಮಿ ಯೋಜನೆ ಬಡತನದ ಬವಣೆಯಿಂದ ಹೊರಬರಲು ಲಕ್ಷಾಂತರ ಜನರಿಗೆ ವರವಾಗಿ ಪರಿಣಮಿಸಿದೆ.
ಬಿ.ಇಡಿ ವಿದ್ಯಾರ್ಥಿಯೊಬ್ಬ ತಂದೆ ಬಳಿ ಹಣ ಕೇಳೋಕಾಗದೆ, ತಾಯಿ ಕೊಡಿಟ್ಟ ಗೃಹಲಕ್ಷ್ಮಿ ಯೋಜನೆಯ ಹಣ ಪರೀಕ್ಷೆಯ ಶುಲ್ಕ ಕಟ್ಟಿಕೊಳ್ಳಲು ಬಳಕೆ ಮಾಡಿದ್ದಾನೆ, ಕಡು-ಬಡತನದಲ್ಲೂ ಜನರಿಂದು ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. ಇದೇ ಅಲ್ಲವೇ ಗೃಹಲಕ್ಷ್ಮಿಯ ಸಾರ್ಥಕತೆ.
ಈ ಸಂದರ್ಭದಲ್ಲಿ ಬಿ.ಇಡಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗೆ ಹಾಗೂ ಆತನ ತಾಯಿಗೆ ಹೃದಯ-ಪೂರ್ವಕ ಶುಭಾಶಯ ಕೋರುತ್ತೇನೆ ಎಂದಿದ್ದಾರೆ.