ಹುಬ್ಬಳ್ಳಿ: ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಅವರ ಜೆ.ಸಿ.ನಗರದ ಕಚೇರಿಯಲ್ಲಿ ಕಳ್ಳತನ ನಡೆದಿದೆ.
ಜೆ.ಸಿ.ನಗರದ ಶಾಸಕರ ಕಚೇರಿಯ ಹಿಂಬದಿಯ ಬಾಗಿಲಿಗೆ ಕನ್ನ ಹಾಕಿರುವ ಖದೀಮರು, ಎಲ್‌ಇಡಿ ಟಿವಿ ಕಳ್ಳತನ ಮಾಡಿದ್ದಾರೆ.
ಶನಿವಾರ ತಡರಾತ್ರಿಯೇ ಕಳ್ಳತನ ನಡೆದಿದ್ದು, ಭಾನುವಾರ ರಜಾದಿನವಾದ್ದರಿಂದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಶಾಸಕರ ಕಚೇರಿಯ ಸಿಬ್ಬಂದಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.