ವಿಜಯಪುರ: ಅಂಗನವಾಡಿ ಬಾಲಕನ ಮೇಲೆ ಶಾಲಾ ಬಸ್ ಹರಿದ ಪರಿಣಾಮ ಬಾಲಕ ಮೃತಪಟ್ಟ ಘಟನೆ ನಡೆದಿದೆ.
ಜಿಲ್ಲೆಯ ನಿಡಗುಂಡಿ ತಾ. ಅರಳದಿನ್ನಿ ಗ್ರಾಮದಲ್ಲಿ ನಡೆದಿದೆ. ಬಸವರಾಜ್ ಮಂಜುನಾಥ ಚೋಪಡೆ (5) ಸಾವನ್ನಪ್ಪಿದ ಬಾಲಕ. ಬಸವರಾಜ್ ಅಂಗನವಾಡಿಗೆ ಹೊರಟಿದ್ದ. ರಸ್ತೆ ದಾಡುವಾಗ ಏಕಾಏಕಿ ಖಾಸಗಿ ಶಾಲಾ ವಾಹನವು ಬಾಲಕಿಗೆ ಗುದ್ದಿದೆ. ಕೆಳಗೆ ಬಿದ್ದವನ ಮೇಲೆ ಹರಿದಿದೆ. ನಿಡಗುಂದಿಯ ಖಾಸಗಿ ಶಾಲೆಯ ವಾಹನ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ನಿಡಗುಂದಿ ಪೊಲೀಸರ ದೌಡಾಯಿಸಿದ್ದು, ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪಿಎಸ್‌ಐ ಶಿವಾನಂದ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲಾ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.