Home ಸುದ್ದಿ ದೇಶ ವೇದಿಕೆಯಲ್ಲೇ ಅಸ್ವಸ್ಥರಾದ ಕೇಂದ್ರ ಸಚಿವ ನಿತಿನ್ ಗಡ್ಕರಿ

ವೇದಿಕೆಯಲ್ಲೇ ಅಸ್ವಸ್ಥರಾದ ಕೇಂದ್ರ ಸಚಿವ ನಿತಿನ್ ಗಡ್ಕರಿ

0
NITIN

ಕೋಲ್ಕತ್ತಾ: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿಯವರರು ವೇದಿಕೆಯ್ಲಲಿಯೇ ಅನಾರೋಗ್ಯಕ್ಕೊಳಗಾದ ಘಟನೆ ಉತ್ತರ ಬಂಗಾಳದಲ್ಲಿ ನಡೆದಿದೆ. ಶಿವಮಂದಿರದಿಂದ ಸೇವಕ್ ಕಂಟೋನ್ಮೆಂಟ್ ವರೆಗಿನ ರಸ್ತೆಯ ಶಂಕು ಸ್ಥಾಪನೆ ಮಾಡಲು ಕೇಂದ್ರ ಸಚಿವರು ಸಿಲಿಗುರಿಗೆ ಬಂದಿದ್ದರು. ಕಾರ್ಯಕ್ರಮವನ್ನು ಡಾರ್ಜಿಲಿಂಗ್ ಜಂಕ್ಷನ್ ಬಳಿಕ ದಗಾಪುರ್ ಮೈದಾನದಲ್ಲಿ ಆಯೋಜಿಸಲಾಗಿತ್ತು. ಹೀಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ ಸಚಿವರು ವೇದಿಕೆ ಮೇಲೆ ಕುಳಿತಿದ್ದರು. ಆಗ ಏಕಾಏಕಿ ಅನಾರೋಗ್ಯಕ್ಕೀಡಾದರು. ಬಿಜೆಪಿ ಪಕ್ಷದ ಮೂಲಗಳ ಪ್ರಕಾರ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗಿದೆ.

Exit mobile version